Tuesday, September 22, 2026

BDA Apartments

ಚೈನಾ ವಸ್ತು ನನ್ನ ಮನೆ ಹೊಸ್ತಿಲಿನ ಮುಂದೆಯೂ ಸುಳಿಯಲ್ಲ ಎಂದ ನಟ ಜಗ್ಗೇಶ್… BDA JK_A...
Home Cinema ಚೈನಾ ವಸ್ತು ನನ್ನ ಮನೆ ಹೊಸ್ತಿಲಿನ ಮುಂದೆಯೂ ಸುಳಿಯಲ್ಲ ಎಂದ ನಟ ಜಗ್ಗೇಶ್…

ಚೈನಾ ವಸ್ತು ನನ್ನ ಮನೆ ಹೊಸ್ತಿಲಿನ ಮುಂದೆಯೂ ಸುಳಿಯಲ್ಲ ಎಂದ ನಟ ಜಗ್ಗೇಶ್…

ಬೆಂಗಳೂರು,ಜೂ,19,2020(www.justkannada.in):  ಭಾರತ ಚೀನಾ ಗಡಿಯಲ್ಲಿ ಸಂಘರ್ಷದಿಂದ ನಮ್ಮ ಯೋಧರು ಹುತಾತ್ಮರಾಗಿದ್ದು ಈ ಮಧ್ಯೆ ಅಭಿಮಾನಿಯೊಬ್ಬರು ಟಿಕ್ ಟಾಕ್ ಬಳಸಲ್ವಾ ಎಂದು ಕೇಳಿದ ಪ್ರಶ್ನೆಗೆ ನಟ ಜಗ್ಗೇಶ್ ಖಡಕ್ ಆಗಿ ಉತ್ತರಿಸಿದ್ದಾರೆ.

ಚೈನ ವಸ್ತು ನನ್ನ ಮನೆ ಹೊಸ್ತಿಲಿನ ಮುಂದೆಯೂ ಸುಳಿಯಲ್ಲ. ನಾನು ಸ್ವಾಭಿಮಾನಿ ಭಾರತೀಯ’ ಎಂದು ಜಗ್ಗೇಶ್ ಖಡಕ್ ಆಗಿ ಹೇಳಿದ್ದಾರೆ. ‘ತಮ್ಮ ಪ್ರತಿಭೆ ಸಾಬೀತುಪಡಿಸಬೇಕಿರುವ ಯುವ ನಟ-ನಟಿಯರಿಗೆ ಇಂತಹ ವೇದಿಕೆ ಬೇಕು. ಚಿತ್ರರಂಗದಲ್ಲಿ 40 ವರ್ಷ ಅನುಭವವಿರುವ ನನಗೆ ಇದು ಬೇಕಾಗಿಲ್ಲ. ನಾನು ಏನೇಮಾಡಿದರೂ ಅದನ್ನು ವಿಡಿಯೋ ಮಾಡಿ ಎಡಿಟ್ ಮಾಡಿ ಬೇಕಾದ ಹಾಡು ಹಿನ್ನಲೆಯ ಸಂಗೀತ ಮಾಡುವ ಯೋಗಿ ಗೌಡ ಮಾಡುತ್ತಾನೆ ಎಂದು ನಟ ಜಗ್ಗೇಶ್ ಉತ್ತರ ನೀಡಿದ್ದಾರೆ.