Monday, September 21, 2026

BDA Apartments

ಮೋದಿ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ ನಟ ಜಗ್ಗೇಶ್ BDA JK_Adv BDA Adv
Home Cinema ಮೋದಿ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ ನಟ ಜಗ್ಗೇಶ್

ಮೋದಿ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ ನಟ ಜಗ್ಗೇಶ್

ಬೆಂಗಳೂರು, ಅಕ್ಟೋಬರ್ 22, 2019 (www.justkannada.in): ನಟ ಜಗ್ಗೇಶ್ ಪ್ರಧಾನಿ ನರೇಂದ್ರ ಮೋದಿ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದಕ್ಷಿಣ ಭಾರತದ ಯಾವೊಬ್ಬ ನಟ-ನಟಿಯರಿಗೂ ಸಂವಾದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಆಹ್ವಾನ ನೀಡದಿರುವುದು ದಕ್ಷಿಣ ಭಾರತ ಚಿತ್ರರಂಗದ ಬಗ್ಗೆ ಮೋದಿ ಅಸಡ್ಡೆ ತೋರುತ್ತಿದ್ದಾರೆ ಎಂದು ಹಲವರು ಬೇಸರ ವ್ಯಕ್ತಪಡಿಸಿದ್ದಾರೆ.

ಟ್ವಿಟರ್ ನಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ನಟ ಜಗ್ಗೇಶ್, ಕನ್ನಡಿಗರು ಪರಭಾಷಾ ಸಿನಿಮಾಗಳಿಗೆ ಹೆಚ್ಚು ಚಪ್ಪಾಳೆ ಹೊಡೆದ ತಪ್ಪಿಗೆ ಇಂದು ದಾರಿತಪ್ಪಿದವರಂತೆ ಆಗಿದ್ದೇವೆ. ಉತ್ತರ ಭಾರತದ ಕಲಾವಿದರಿಗಿಂತ ಸ್ಯಾಂಡಲ್‌ವುಡ್‌ ಕಲಾವಿದರು ಯಾವುದರಲ್ಲೂ ಕಡಿಮೆ ಇಲ್ಲ ಎಂದು ಹೇಳಿದ್ದಾರೆ.