ಮತ್ತೊಮ್ಮೆ ನಿರ್ದೇಶಕನ ಕ್ಯಾಪ್ ತೊಡಲು ನಟ ವಿಜಯ್ ಸಜ್ಜು !

ಬೆಂಗಳೂರು, ಫೆಬ್ರವರಿ 19, 2022 (www.justkannada.in): ಮತ್ತೊಮ್ಮೆ ನಿರ್ದೇಶಕನ ಕ್ಯಾಪ್ ತೊಡಲು ನಟ ವಿಜಯ್ ಸಜ್ಜಾಗಿದ್ದಾರೆ.

ಹೌದು. ‘ಸಲಗ’ ಸಿನಿಮಾ ನಿರ್ದೇಶಿಸಿ ಯಶಸ್ಸು ಕಂಡಿದ್ದ ನಟ ದುನಿಯಾ ವಿಜಯ್ ಈಗ ಮತ್ತೊಮ್ಮೆ ನಿರ್ದೇಶಕನ ಕ್ಯಾಪ್ ತೊಡಲು ಸಜ್ಜಾಗಿದ್ದಾರೆ.

ಸಲಗ ನಿರ್ದೇಶಕನಾಗಿ ಸಿಕ್ಕಿದ್ದ ಯಶಸ್ಸು ಅವರಲ್ಲಿ ಮತ್ತೊಮ್ಮೆ ನಿರ್ದೇಶನ ಮಾಡುವ ಹುಮ್ಮಸ್ಸು ಮೂಡಿಸಿತ್ತು. ಹೀಗಾಗಿ ಮತ್ತೊಂದು ಸಿನಿಮಾ ನಿರ್ದೇಶಿಸುವುದಾಗಿ ಅಂದೇ ಘೋಷಿಸಿದ್ದರು.

ಹೊಸ ಸಿನಿಮಾದ ಸ್ಕ್ರಿಪ್ಟ್ ಕೆಲಸಗಳಲ್ಲಿ ವಿಜಿ ಬ್ಯುಸಿಯಾಗಿದ್ದಾರೆ. ಸದ್ಯದಲ್ಲೇ ಇದರ ಬಗ್ಗೆ ಘೋಷಣೆ ಮಾಡಲಿದ್ದಾರೆ. ಇದರ ಜೊತೆಗೆ ತೆಲುಗಿನಲ್ಲೂ ಒಂದು ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.