ಶಾಲಾ ಮಂಡಳಿಗಳೇ ಹಿಜಾಬ್ ಸಮಸ್ಯೆ ಬಗೆಹರಿಸಬೇಕು-ಸಿಎಂ ಬಸವರಾಜ ಬೊಮ್ಮಾಯಿ.

ಬೆಂಗಳೂರು,ಫೆಬ್ರವರಿ,19,2022(www.justkannada.in):   ರಾಜ್ಯದಲ್ಲಿ ಉಂಟಾಗಿರುವ ಹಿಜಾಬ್ ವಿವಾದ ಸಂಬಂಧ ಹೈಕೋರ್ಟ್ ನಲ್ಲಿ ದಿನನಿತ್ಯ ವಿಚಾರಣೆ ನಡೆಯುತ್ತಿದ್ದು ಶೀಘ್ರದಲ್ಲೇ ಅಂತಿಮ ತೀರ್ಪು ಹೊರಬರಲಿದೆ. ಈ ಮಧ್ಯೆ ಶಾಲಾ ಮಂಡಳಿಗಳೇ ಹಿಜಾಬ್ ಸಮಸ್ಯೆ ಬಗೆಹರಿಸಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಕೋರ್ಟ್ ಆದೇಶವನ್ನ ಎಲ್ಲರೂ ಪಾಲಿಸಬೇಕು ಹೊರಗಿನವರಿಂದಾಗಿ ಈ ರೀತಿಯ ಸಮಸ್ಯೆಯಾಗ್ತಿದೆ.  ಶಾಲಾ ಮಂಡಳಿಗಳೇ ಹಿಜಾಬ್ ಸಮಸ್ಯೆ ಬಹಗೆಹರಿಬೇಕು ತಿಲಕ ಕುಂಕುಮ ಇಡುವ ವಿಚಾರಕ್ಕೂ ಸಮಸ್ಯೆಯಾಗುತ್ತಿದೆ.  ಈ ಬಗ್ಗೆಯೂ ಮಾಹಿತಿ ಪಡೆದು ಪರಿಶೀಲನೆ ಮಾಡುತ್ತೇವೆ.

ಶಾಲೆ ಕಾಲೇಜಿನಲ್ಲಿ ಶಾಂತಿ ಸೌಹಾರ್ದತೆ ಮೂಡಬೇಕು. ಈ ನಿಟ್ಟಿನಲ್ಲಿ ಶಾಲಾ-ಕಾಲೇಜು ಕೆಲಸ ಮಾಡಲಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

Key words: School-boards – hijab- problem-CM Basavaraja Bommai.