Thursday, September 10, 2026

BDA Apartments

Home Cinema ನಟ ದರ್ಶನ್ ಗೆ ಬೇಲ್ ಸಿಕ್ಕಿದ ಬೆನ್ನಲ್ಲೆ ದೇವರ ಮೊರೆ ಹೋದ ಪತ್ನಿ ವಿಜಯಲಕ್ಷ್ಮಿ

ನಟ ದರ್ಶನ್ ಗೆ ಬೇಲ್ ಸಿಕ್ಕಿದ ಬೆನ್ನಲ್ಲೆ ದೇವರ ಮೊರೆ ಹೋದ ಪತ್ನಿ ವಿಜಯಲಕ್ಷ್ಮಿ

ಬಳ್ಳಾರಿ,ಅಕ್ಟೋಬರ್,30,2024 (www.justkannada.in):  ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಗೆ ಮಧ್ಯಂತರ ಜಾಮೀನು ಮಂಜೂರಾದ ಬೆನ್ನಲ್ಲೇ ಪತ್ನಿ ವಿಜಯಲಕ್ಷ್ಮೀ  ದೇವರ ಮೊರೆ ಹೋಗಿದ್ದಾರೆ.

ಬಳ್ಳಾರಿಯ ಕನಕ ದುರ್ಗಮ್ಮ ದೇವಿ ದೇವಸ್ಥಾನಕ್ಕೆ ತೆರಳಿದ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ವಿಶೇಷ ಪೂಜೆ ಸಲ್ಲಿಸಿದರು. ಅನಾರೋಗ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ನಟ ದರ್ಶನ್ ಗೆ  ಹೈಕೋರ್ಟ್‌ 6 ವಾರಗಳ ಕಾಲ ಜಾಮೀನು ಮಂಜೂರು ಮಾಡಿದ್ದು ಈ ಬೆನ್ನಲ್ಲೇ ದರ್ಶನ್ ಪತ್ನಿ ವಿಜಯಲಕ್ಷ್ಮೀ ಹಾಗೂ ಸಂಬಂಧಿ ಸುಶಾಂತ ನಾಯ್ಡು ಜತೆ ನಗರದ ಕನಕ ದುರ್ಗಮ್ಮ ದೇವಿಗೆ ಕುಂಕಮರ್ಚಾನೆ ಸೇರಿ ವಿಶೇಷ ಪೂಜೆ ಸಲ್ಲಿಸಿದರು.

ನಟ ದರ್ಶನ್ ರನ್ನು ಬಳ್ಳಾರಿ ಜೈಲಿನಿಂದ ಬಿಡುಗಡೆ ಮಾಡಲು ಪ್ರಕ್ರಿಯೆಗಳು ನಡೆಯುತ್ತಿದ್ದು ಸುಶಾಂತ್ ನಾಯ್ಡು ಅವರು ಜೈಲಿಗೆ ಜಾಮೀನು ಪ್ರತಿ ತಂದಿದ್ದಾರೆ ಎನ್ನಲಾಗಿದೆ. ಕೆಲವೇ ಕ್ಷಣದಲ್ಲಿ  ದರ್ಶನ್ ಬಿಡುಗಡೆಯಾಗಲಿದ್ದಾರೆ.

Key words: Actor, Darshan, wife, Vijayalakshmi, God , bail