Thursday, August 13, 2026

BDA Apartments

Home Front Page ಆರ್ ಆರ್ ನಗರ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾದ ನಟ ದರ್ಶನ್.

ಆರ್ ಆರ್ ನಗರ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾದ ನಟ ದರ್ಶನ್.

ಬೆಂಗಳೂರು,ನವೆಂಬರ್,15,2023(www.justkannada.in): ಮಹಿಳೆಗೆ ನಟ ದರ್ಶನ್ ಅವರ ಮನೆಯ ನಾಯಿ ಕಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ವಿಚಾರಣೆಗೆ ಆರ್ ಆರ್ ನಗರ ಪೊಲೀಸ್ ಠಾಣೆಗೆ ಹಾಜರಾಗಿ ನಿರ್ಗಮಿಸಿದ್ದಾರೆ.

ಪ್ರಕರಣ ಸಂಬಂದ ಮೂರು ದಿನಗಳ ಒಳಗೆ ವಿಚಾರಣೆಗೆ ಹಾಜರಾಗಬೇಕು. ಸಿಸಿ ಟಿವಿ ವಿಡಿಯೋ ಸಮೇತ ಹಾಜರಾಗಬೇಕು ಎಂದು ಪೊಲೀಸರು ನಟ ದರ್ಶನ್ ಗೆ ನೋಟಿಸ್ ನೀಡಿದ್ದರು.

ನೋಟಿಸ್ ನೀಡಿದ ಹಿನ್ನೆಲೆ ಇಂದು ನಟ ದರ್ಶನ್ ವಿಚಾರಣೆಗೆ ಆರ್ ಆರ್ ನಗರ ಪೊಲೀಸ್ ಠಾಣೆಗೆ ಹಾಜರಾಗಿದ್ದು ಪೊಲೀಸರು ಹೇಳಿಕೆ ದಾಖಲು ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಪೊಲೀಸ್ ಠಾಣೆಯಿಂದ ನಟ ದರ್ಶನ್ ನಿರ್ಗಮಿಸಿದ್ದಾರೆ.

Key words: Actor- Darshan -attended – RR Nagar- police station