Saturday, September 12, 2026

BDA Apartments

ಮಣ್ಣಲ್ಲಿ ಮಣ್ಣಾದ ನಟ ಚಿರಂಜೀವಿ ಸರ್ಜಾ: ಇನ್ನು ನೆನಪು ಮಾತ್ರ… BDA JK_Adv BDA Adv
Home Cinema ಮಣ್ಣಲ್ಲಿ ಮಣ್ಣಾದ ನಟ ಚಿರಂಜೀವಿ ಸರ್ಜಾ: ಇನ್ನು ನೆನಪು ಮಾತ್ರ….

ಮಣ್ಣಲ್ಲಿ ಮಣ್ಣಾದ ನಟ ಚಿರಂಜೀವಿ ಸರ್ಜಾ: ಇನ್ನು ನೆನಪು ಮಾತ್ರ….

ಬೆಂಗಳೂರು,ಜೂ,8,2020(www.justkannada.in):  ಹೃದಯಾಘಾತದಿಂದ ನಿಧನರಾದ ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ ಅವರ ಅಂತ್ಯಕ್ರಿಯೆ ಹಿಂದೂ ಸಂಪ್ರದಾಯದಂತೆ ಬೆಂಗಳೂರು ದಕ್ಷಿಣ ತಾಲ್ಲೂಕಿನ ನೆಲಗುಳಿ ಫಾರ್ಮ್ ಹೌಸ್ ನಲ್ಲಿ ನೆರವೇರಿತು.actor-chiranjeevi-sarja-death-crimination-bangalore

ನಟ ಚಿರಂಜೀವಿ ಸರ್ಜಾ ಅವರಿಗೆ ನಿನ್ನೆ ಹೃದಯಾಘಾತವಾಗಿ ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿರಂಜೀವಿ ಸರ್ಜಾ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು. ಬಳಿಕ ಅವರ ಪಾರ್ಥೀವ ಶರೀರವನ್ನ ಬೆಂಗಳೂರಿನ ಬಸವನಗುಡಿ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಕಲಾವಿದರು, ಅಭಿಮಾನಿಗಳು ಅನೇಕ ಗಣ್ಯಾತೀಗಣ್ಯರು ಆಗಮಿಸಿ ನಟ ಚಿರಂಜೀವಿ ಸರ್ಜಾರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು.  ಬಳಿಕ ಪಾರ್ಥೀವ ಶರೀರವನ್ನ ನೆಲೆಗುಳಿ ಫಾರ್ಮ್ ಹೌಸ್ ಗೆ ಮೆರವಣಿಗೆ ಮೂಲಕ ತರಲಾಯಿತು.

ನೆಲಗುಳಿ ಫಾರ್ಮ್ ಹೌಸ್ ಬಳಿ ನಟ ಚಿರಂಜೀವಿ ಸರ್ಜಾ ಅವರ ಅಂತ್ಯಕ್ರಿಯೆ ಹಿಂದೂ ಸಂಪ್ರದಾಯದಂತೆ ನೆರವೇರಿತು. ಈ ವೇಳೆ ಪತ್ನಿ ಮೇಘನಾರಾಜ್, ಸಹೋದರ ದೃವಸರ್ಜಾ ಸೇರಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.

Key words: actor- chiranjeevi sarja-death-crimination-bangalore