Sunday, August 23, 2026

BDA Apartments

Home Cinema ಪೊಲೀಸರ ವಿಚಾರಣೆಗೆ ಹಾಜರಾದ ನಟ ಆದಿತ್ಯ, ರಾಜೇಂದ್ರಸಿಂಗ್ ಬಾಬು

ಪೊಲೀಸರ ವಿಚಾರಣೆಗೆ ಹಾಜರಾದ ನಟ ಆದಿತ್ಯ, ರಾಜೇಂದ್ರಸಿಂಗ್ ಬಾಬು

ಬೆಂಗಳೂರು, ಮೇ 17, 2019 (www.justkannada.in): ಮನೆ ಬಾಡಿಗೆ ಸಂಬಂಧ ದಾಖಲಾಗಿರುವ ದೂರಿಗೆ ಸ್ಪಷ್ಟನೆ ನೀಡಲು ನಟ ಆದಿತ್ಯ ಪೋಲೀಸರ ಮುಂದೆ ಹಾಜರಾಗಿದ್ದಾರೆ.

ಬೆಂಗಳೂರಿನ ಸದಾಶಿವನಗರದ ಆರ್ ಎಂವಿಎಕ್ಸ್ ಬಡಾವಣೆ ಬಳಿ ಇರುವ ಪ್ರಸನ್ನ ಅವರ ಮನೆಯಲ್ಲಿ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಪುತ್ರ ನಟ ಆದಿತ್ಯ ಕಳೆದ ನಾಲ್ಕು ವರ್ಷಗಳಿಂದ ವಾಸವಿದ್ದು, ಕೆಲ ತಿಂಗಳಿಂದ ಬಾಡಿಗೆ ಕಟ್ಟಿಲ್ಲ ಎಂದು ಮನೆ ಮಾಲೀಕ ಪ್ರಸನ್ನ ದೂರು ನೀಡಿದ್ದರು.

ಈ ಪ್ರಕರಣ ಸಂಬಂಧ ಠಾಣೆಗೆ ಹಾಜರಾಗುವಂತೆ ಪೊಲೀಸರು ನಟ ಆದಿತ್ಯಗೆ ನೋಟಿಸ್ ನೀಡಿದ್ದರು. ಈ ಸಂಬಂಧ ಇಂದು ನಟ ಆದಿತ್ಯ ಹಾಗೂ ತಂದೆ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು ಪೊಲೀಸರ ಮುಂದೆ ಹಾಜರಾಗಿ ಸ್ಪಷ್ಟನೆ ನೀಡಿದ್ದಾರೆ.