ಕೆಜಿಎಫ್-2 ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ತೆಲುಗಿನ ರಾವ್ ರಮೇಶ್

ಬೆಂಗಳೂರು, ಮೇ 17, 2019 (www.justkannada.in): ಟಾಲಿವುಡ್ ನಟ ರಾವ್ ರಮೇಶ್ ಕೆಜಿಎಫ್ -2 ನಲ್ಲಿ ಅವಕಾಶ ಪಡೆದಿದ್ದಾರೆ.

ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಕೆ.ಜಿ.ಎಫ್ ಸ್ಟಾರ್ ಯಶ್, ರಾವ್ ರಮೇಶ್ ರನ್ನು ಕೆಜಿಎಫ್ 2 ಚಿತ್ರದಲ್ಲಿ ನಟಿಸಲು ಕೇಳಿಕೊಂಡಿದ್ದಾರೆ.

ಒಂದು ವಿಭಿನ್ನ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಇತ್ತೀಚಿನ ದಿನಗಳಲ್ಲಿ, ಅವರು ಮಜಲಿ ಮತ್ತು ಮಹರ್ಷಿ ಚಲನಚಿತ್ರಗಳಲ್ಲಿ ನಟಿಸಿ ತೆಲುಗು ಪ್ರೇಕ್ಷಕರನ್ನು ಮೋಡಿ ಮಾಡಿದ್ದರು.