Saturday, August 8, 2026

BDA Apartments

Home Cinema ಲಾಕ್ ಡೌನ್ ಬಳಿಕ ರಿಲೀಸ್ ಆಗುತ್ತಿರುವ ಮೊದಲ ಸೌತ್ ಇಂಡಿಯನ್ ಚಿತ್ರ Act 1978

ಲಾಕ್ ಡೌನ್ ಬಳಿಕ ರಿಲೀಸ್ ಆಗುತ್ತಿರುವ ಮೊದಲ ಸೌತ್ ಇಂಡಿಯನ್ ಚಿತ್ರ Act 1978

ಬೆಂಗಳೂರು, 07, ನವೆಬರ್ 2020: ಮಂಸೋರೆ ನಿರ್ದೇಶನದ Act 1978 ಸಿನಿಮಾವನ್ನು ನವೆಂಬರ್ 20 ರಂದು ಬಿಡುಗಡೆ ಮಾಡಲು ನಿರ್ದರಿಸಿದ್ದಾರೆ.

ಚಿತ್ರಮಂದಿರದಲ್ಲಿ ರಿಲೀಸ್ ಆಗುತ್ತಿರುವ ದಕ್ಷಿಣ ಭಾರತದ ಮೊದಲ ಹೊಸ ಸಿನಿಮಾ ಇದಾಗಲಿದೆ ಈಗಾಗಲೇ ಈ ಸಿನಿಮಾ, ಟ್ರೈಲರ್ ಮೂಲಕ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಹೆಚ್ಚಿಸಿದೆ.

ಈ ಕುರಿತು ನಿರ್ದೇಶಕ ಮಂಸೋರೆ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.

ದೇವರಾಜ್ ನಿರ್ಮಾಣದಲ್ಲಿ ಈ ಚಿತ್ರ ಮೂಡಿ ಬರುತ್ತಿದ್ದು ಯಜ್ಞಾ ಶೆಟ್ಟಿ, ಸಂಚಾರಿ ವಿಜಯ್, ಬಿ. ಸುರೇಶ್, ಶ್ರುತಿ, ಸುಧಾ ಬೆಳವಾಡಿ ಸೇರಿದಂತೆ ಸಾಕಷ್ಟು ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಹೇಳಿದಂತೆ ನವೆಂಬರ್ 20ರಂದು ಈ ಚಿತ್ರ ಚಿತ್ರಮಂದಿರಗಳಿಗೆ ಲಗ್ಗೆ ಇಡಲಿದೆ.