Tuesday, August 4, 2026

BDA Apartments

Home Crime  ಮಾಜಿ ಸಿಎಂ ಸಿದ‍್ಧರಾಮಯ್ಯ ಕಾರಿಗೆ ಮೊಟ್ಟೆ ಎಸೆದಿದ್ಧ ಆರೋಪಿ ಬಂಧನ.

 ಮಾಜಿ ಸಿಎಂ ಸಿದ‍್ಧರಾಮಯ್ಯ ಕಾರಿಗೆ ಮೊಟ್ಟೆ ಎಸೆದಿದ್ಧ ಆರೋಪಿ ಬಂಧನ.

ಕೊಡಗು,ಆಗಸ್ಟ್,20,2022(www.justkannada.in):  ಕೊಡಗಿನ ನೆರೆಹಾನಿ ಪ್ರವಾಸದ ವೇಳೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಕಾರಿಗೆ ಮೊಟ್ಟೆ ಎಸೆದಿದ್ಧ ಕಾರ್ಯಕರ್ತ ಯಾರೆಂದು ತಿಳಿದು ಬಂದಿದ್ದು ಆತನನ್ನ ಬಂಧಿಸಲಾಗಿದೆ.

ಸಂಪತ್ ಎಂಬಾತನೇ ಮೊಟ್ಟೆ ಎಸೆದಿರುವ ಆರೋಪಿ. ಸಂಪತ್ ಬಿಜೆಪಿ ಕಾರ್ಯಕರ್ತ ಎನ್ನಲಾಗಿದೆ.  ಮೊದಲು ಜೆಡಿಎಸ್ ನಲ್ಲಿದ್ಧ ಆರೋಪಿ ಸಂಪತ್ ಬಳಿಕ ಕಾಂಗ್ರೆಸ್ ಸೇರ್ಪಡೆಯಾಗಿದ್ದನು. ಈಗ ಬಿಜೆಪಿಯಲ್ಲಿದ್ದಾನೆ ಎನ್ನಲಾಗಿದೆ.  ಸಂಪತ್ ಬಿಜೆಪಿ ಕಾರ್ಯಕರ್ತ ಎಂಬುದನ್ನ ಬಿಜೆಪಿ ತಳ್ಳಿಹಾಕಿದ್ದು ಸಂಪತ್ ಕಾಂಗ್ರೆಸ್ ಬಾವುಟ ಹಿಡಿದಿರುವ ಫೋಟೊ ಬಿಡುಗಡೆ ಮಾಡಿದೆ.

ಗುರುವಾರ ಕೊಡಗು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ಧ ಸಿದ‍್ಧರಾಮಯ್ಯ ಅವರು ನೆರೆಹಾನಿ ವೀಕ್ಷಣೆ  ಮಾಡುತ್ತಿದ್ದರು. ಈ ಮಧ್ಯೆ ಸಿದ್ಧರಾಮಯ್ಯ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸಿತ್ತು. ಈ ವೇಳೆ  ಸಂಪತ್ ಎಂಬಾತ ಮೊಟ್ಟೆ ಎಸೆದಿದ್ದ ಎನ್ನಲಾಗಿದೆ.

Key words: Accused – threw -eggs -former CM Siddaramaiah’s –car- arrested.