ನಾನು ಯಾವ ಪಶ್ಚಾತಾಪವನ್ನೂ ಪಟ್ಟಿಲ್ಲ: ಧರ್ಮ ಒಡೆಯುವ ಉದ್ಧೇಶವಿರಲಿಲ್ಲ- ಮಾಜಿ ಸಿಎಂ ಸಿದ್ಧರಾಮಯ್ಯ.

ಬೆಂಗಳೂರು,ಆಗಸ್ಟ್,20,2022(www.justkannada.in): ನಿನ್ನೆ ಮಾಜಿ ಸಿಎಂ ಸಿದ್ದರಾಮಯ್ಯ ಚಿಕ್ಕಮಗಳೂರಿನ ಬಾಳೆಹೊನ್ನೂರಿನ ರಂಭಾಪುರಿ ಮಠಕ್ಕೆ ಭೇಟಿ ನೀಡಿದ್ದ ವೇಳೆ ಪ್ರತ್ಯೇಕ ಲಿಂಗಾಯಿತ ಧರ್ಮದ ವಿಚಾರದಲ್ಲಿ ಪಶ್ಚಾತಾಪಪಟ್ಟರು ಎಂದು ವರದಿಯಾದ ಹಿನ್ನೆಲೆ ಈ ಕುರಿತು ಸಿದ್ಧರಾಮಯ್ಯ ಅವರೇ ಸ್ಪಷ್ಟನೆ ನೀಡಿದ್ದಾರೆ.

ನಾನು ರಂಭಾಪುರಿ ಶ್ರೀಗಳ ಬಳಿ ಯಾವ ನೋವು ಹೇಳಿಕೊಂಡಿಲ್ಲ, ಪಶ್ಚಾತ್ತಾಪ ಪಟ್ಟಿಲ್ಲ, ಅವತ್ತು ಏನಾಯ್ತು ಅಂತ ಹೇಳಿದ್ದೇನೆ ಅಷ್ಟೇ. ಸ್ವಾಮೀಜಿಗೆ ಏನು ನಡೆಯಿತು ಎಂದು ಹೇಳಿದ್ದೇನೆ ಅಷ್ಟೇ. ಪಶ್ಚಾತಾಪದ ಹೇಳಿಕೆ ಬಗ್ಗೆ ಗೊತ್ತಿಲ್ಲ ಎಂದು ಸಿದ್ಧರಾಮಯ್ಯ ತಿಳಿಸಿದ್ದಾರೆ.

ನನ್ನ ಹೇಳಿಕೆ ಅಪಪ್ರಚಾರ ಆಗಿದೆ. ಧರ್ಮದ ಬಗ್ಗೆ ನಾನೇನು ತಲೆ ಕೆಡಿಸಿಕೊಳ್ಳಲು ಹೋಗಿರಲಿಲ್ಲ. ಶ್ಯಾಮನೂರು ಶಿವಶಂಕರಪ್ಪ , ಗದಗ ಸ್ವಾಮೀಜಿ  ಅವರು ಬಂದು ಒಂದು ಲೆಟರ್ ಕೊಟ್ಟರು.  ವೀರಶೈವ ಧರ್ಮ ಮಾಡಿ ಅಂತ ಅರ್ಜಿ ಕೊಟ್ಟರು ಆಗಿನಿಂದ ಇದು ಶುರುವಾಯ್ತು ಅಷ್ಟೇ. ನಾಗಮೋಹನ್ ದಾಸ್ ಸಮಿತಿ ವರದಿ ಬಗ್ಗೆ ಕ್ಯಾಬಿನೆಟ್ ನಲ್ಲಿ ಚರ್ಚೆಯಾಯಿತು. ನಮಗೆ ಧರ್ಮ ಒಡೆಯುವ ಉದ್ಧೇಶವಿರಲಿಲ್ಲ ಎಂದು ಸಿದ್ಧರಾಮಯ್ಯ ತಿಳಿಸಿದರು.

Key words: no regrets-no intention – break- religion-  Former CM- Siddaramaiah.