Monday, October 12, 2026

Dasara Wishes

ಯಾದಗಿರಿಗೆ ಕೇಂದ್ರ ಅಧ್ಯಯನ ತಂಡ ಭೇಟಿ: ನೆರೆಹಾನಿ ಪ್ರದೇಶಗಳ ಪರಿಶೀಲನೆ DasraWishes_...
Happy Dasara
Home Crime ಭೀಕರ ಅಪಘಾತ: ಒಂದೇ ಕುಟುಂಬದ ಐವರು ಸಾವು

ಭೀಕರ ಅಪಘಾತ: ಒಂದೇ ಕುಟುಂಬದ ಐವರು ಸಾವು

ಯಾದಗಿರಿ, ಫೆಬ್ರವರಿ, 5,2025 (www.justkannada.in): ಬೈಕ್ ಗೆ ಸಾರಿಗೆ ಬಸ್ ಡಿಕ್ಕಿಯಾಗಿ ಒಂದೇ ಕುಟುಂಬದ ಐವರು ಸಾವನ್ನಪ್ಪಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ತಿಂಥಣಿ ಬಳಿ ನಡೆದಿದೆ.ಭೀಕರ ಅಪಘಾತ: ಒಂದೇ ಕುಟುಂಬದ ಐವರು ಸಾವು nypunya1

ಪತಿ ಅಂಜನೇಯ (35)  ಪತ್ನಿ ಗಂಗಮ್ಮ(28),  ಪುತ್ರ ಹನುಮಂತ(1), ಸಹೋದರನ ಮಕ್ಕಳಾದ ಪವಿತ್ರ (5) ರಾಯಪ್ಪ(3) ಮೃತಪಟ್ಟವರು. ಬೈಕ್ ನಲ್ಲಿ ಸುರಪುರದಿಂದ ತಿಂಥಣಿ ಕಡೆಗೆ ಹೊರಟ್ಟಿದ್ದ ವೇಳೆ ಎರಡು ಬೈಕ್​ಗೆ ಸಾರಿಗೆ ಬಸ್ ಡಿಕ್ಕಿಯಾಗಿದೆ ಎನ್ನಲಾಗಿದೆ. ಐವರು ಪೈಕಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದರೇ ಇಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿ ಕೊನೆಯುಸಿರೆಳೆದಿದ್ದಾರೆ.

ಮೃತರು ಯಾದಗಿರಿ ಜಿಲ್ಲೆ ಶಹಪುರ ಹಳಿಸಗರ ನಿವಾಸಿಗಳು ಎನ್ನಲಾಗಿದೆ. ಸುರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.

Key words: accident, Five, same family,  die