Friday, October 2, 2026

BDA Apartments

Home Front Page ಮೈಸೂರಿನಲ್ಲಿ ಮಾಜಿ ಸಿಎಂ ಬಿಎಸ್ ವೈ ಬೆಂಬಲಿಗರ ವಾಹನಗಳ ನಡುವೆ ಅಪಘಾತ.

ಮೈಸೂರಿನಲ್ಲಿ ಮಾಜಿ ಸಿಎಂ ಬಿಎಸ್ ವೈ ಬೆಂಬಲಿಗರ ವಾಹನಗಳ ನಡುವೆ ಅಪಘಾತ.

ಮೈಸೂರು,ಆಗಸ್ಟ್,23,2022(www.justkannada.in):  ಮಾಜಿ ಸಿಎಂ  ಬಿಎಸ್ ಯಡಿಯೂರಪ್ಪ ಬೆಂಬಲಿಗರ ವಾಹನಗಳ ನಡುವೆ ಅಪಘಾತ ಸಂಭವಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ವೀರ ಸಾವರ್ಕರ್ ರಥಯಾತ್ರೆಗೆ ಚಾಲನೆ ನೀಡಲು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮೈಸೂರಿಗೆ ಆಗಮಿಸಿದ್ದರು. ಈ ನಡುವೆ ಕೊಲಂಬಿಯಾ ಏಷ್ಯಾ ವೃತ್ತದ ಬಳಿ  ಬಿಎಸ್ ವೈ ಅವರ ಹಿಂದೆ ಸಾಗುವ ಬರದಲ್ಲಿ ಬೆಂಬಲಿಗರ ವಾಹನ  ಪರಸ್ಪರ ಡಿಕ್ಕಿಯಾಗಿದೆ.ಮೈಸೂರಿನಲ್ಲಿ ಮಾಜಿ ಸಿಎಂ ಬಿಎಸ್ ವೈ ಬೆಂಬಲಿಗರ ವಾಹನಗಳ ನಡುವೆ ಅಪಘಾತ accident

KSIIDC ನಿರ್ದೇಶಕ ಮಹದೇವಸ್ವಾಮಿ ಹಾಗೂ ಬಿಜೆಪಿ ಮುಖಂಡ ಸಂದೇಶ್ ಗೆ ಸೇರಿದ ಇನೋವಾ ಕಾರುಗಳಿಗೆ ಡಿಕ್ಕಿಯಾಗಿದೆ. ಅಪಘಾತದ ಬಳಿಕ ಬಿಜೆಪಿ ಮುಖಂಡ  ಸಂದೇಶ್ ಹಾಗೂ KSIIDC   ನಿರ್ದೇಶಕ ಮಹದೇವಸ್ವಾಮಿ ವಾಗ್ವಾದಕ್ಕೆ ಇಳಿದರು.  ಈ ವೇಳೆ ಪೊಲಿಸರು ಮಧ್ಯೆ ಪ್ರವೇಶಿಸಿ ಇಬ್ಬರನ್ನು ಸಮಾಧಾನ ಪಡಿಸಿದರು.  ಎನ್.ಆರ್. ಟ್ರಾಫಿಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ‌ ನಡೆದಿದೆ.

Key words: Accident-between -vehicles -former CM –BSY- supporters -Mysore.