ಕಾಂಗ್ರೆಸ್ ‘ಮಡಿಕೇರಿ ಚಲೋ’ ಮುಂದೂಡಿಕೆ: ಒಂದೆರೆಡು ಕಡೆ ಬಟ್ಟೆಯಲ್ಲಿ ಕಲ್ಲಿಟ್ಟು ಹೊಡೆದರು- ಸಿದ್ಧರಾಮಯ್ಯ ಆರೋಪ.  

ಬೆಂಗಳೂರು,ಆಗಸ್ಟ್,23,2022(www.justkannada.in):ಕಾರಿನ ಮೇಲೆ ಮೊಟ್ಟೆ ಎಸೆತ ಘಟನೆ ಖಂಡಿಸಿ  ಕಾಂಗ್ರೆಸ್ ಕರೆ ನೀಡಿದ್ದ ಮಡಿಕೇರಿ ಚಲೋ ಮುಂದೂಡಿಕೆ  ಮಾಡಿರುವುದಾಗಿ  ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ಮಡಿಕೇರಿ ಚಲೋ ಮುಂದೂಡಲು ನಿರ್ಧಾರ ಮಾಡಲಾಗಿದೆ. ಮಡಿಕೇರಿ ಚಲೋ ಮಾಡಲ್ಲ. ಇದು ನನ್ನ ನಿರ್ಧಾರ ಅಲ್ಲ ಇದು ಪಕ್ಷದ ನಿರ್ಧಾರ.  ನಿಷೇಧಾಜ್ಞೆ ಉಲ್ಲಂಘಿಸಿ ಪ್ರತಿಭಟನೆ ಮಾಡಬಾರದು. ನಾವು ಕಾನೂನಿಗೆ ಗೌರವ ಕೊಡುತ್ತೇವೆ. ವಿಪಕ್ಷ ನಾಯಕನಾಗಿ ನಾನು ಹಾಗೆ ಮಾಡಲ್ಲ. ನಾವು ಕಾಯ್ದೆ ಕಾನೂನು ಉಲ್ಲಂಘನೆ ಮಾಡಲ್ಲ. ಬಿಜೆಪಿಯವರು ಬೇಕು ಅಂತಲೇ ಈ ರೀತಿ ಮಾಡಿದ್ದಾರೆ. ಇದು ರಾಜಕೀಯ ಷಡ್ಯಂತ್ರ ಎಂದು ಗುಡುಗಿದರು.

ಮಡಿಕೇರಿ ಚಲೋ ಘೋಷಿಸಿದ ಮರುಇವೇ ಜನಜಾಗೃತಿ ಸಮಾವೇಶ ಘೋಷಿಸಿದರು ಇದು ಬಿಜೆಪಿಯವರ ನಾಟಕ.  ಜಿಲ್ಲಾಧಿಕಾರಿ ಆದೇಶ ಎಂದರೆ ಸರ್ಕಾರದ ಆದೇಶ. ಜವಾಬ್ದಾರಿಯುತ ಪ್ರತಿಪಕ್ಷವಾಗಿ ನಾವು ಸರ್ಕಾರದ ಆದೇಶವನ್ನು ಪರಿಪಾಲಿಸುತ್ತೇವೆ. ಕೊಡಗು ಜಿಲ್ಲೆಯಲ್ಲಿ ನಾನು ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆಯನ್ನು ಮುಂದೂಡಲು ನಿರ್ಧರಿಸಿದ್ದೇವೆ ಎಂದರು.

ಆಗಸ್ಟ್ 18ರಂದು ಅತಿವೃಷ್ಟಿಯಿಂದಾದ ಹಾನಿ ವೀಕ್ಷಿಸುವುದಕ್ಕಾಗಿ ಕೊಡಗು ಜಿಲ್ಲೆಗೆ ಹೋಗಿದ್ದೆ, ತಿತಿಮತಿಯಲ್ಲಿ 15-20 ಜನ ಕಪ್ಪು ಬಾವುಟ ಪ್ರದರ್ಶಿಸಿದರು ಆದರೆ ಪೊಲೀಸರು ಏನೂ ಮಾಡದೇ ಸುಮ್ಮನೆ ನಿಂತಿದ್ದರು. ಅವರು ಕಪ್ಪು ಬಾವುಟ ಕಾರಿನಲ್ಲಿ ಹಾಕಲು ಬಂದ್ರೂ ಸುಮ್ಮನಿದ್ದರು. ಕೊಡಗಿನಲ್ಲಿ ಪ್ರವಾಹ ಪರಿಸ್ಥಿತಿ ಇದ್ರೂ ಸರ್ಕಾರ ಏನೂ ಮಾಡಿಲ್ಲ ಎಂದು ಸಿದ್ಧರಾಮಯ್ಯ ಕಿಡಿಕಾರಿದರು.

ಒಂದೆರೆಡು ಕಡೆ ಬಟ್ಟೆಯಲ್ಲಿ ಕಲ್ಲಿಟ್ಟು ಹೊಡೆದರು.

ಪ್ರತಿಭಟನೆ ವೇಳೆ ಒಂದೆರಡು ಕಡೆ ಬಟ್ಟೆಯಲ್ಲಿ ಕಲ್ಲಿಟ್ಟು ಹೊಡೆದಿದ್ದಾರೆ ಎಂದು ಗಂಭೀರ ಆರೋಪ ಮಾಡಿದ ಸಿದ್ಧರಾಮಯ್ಯ,  ಅಲ್ಲಿದ್ದವರೆಲ್ಲ ಬಜರಂಗದಳ ಹಾಗೂ ಬಿಜೆಪಿ ಕಾರ್ಯಕರ್ತರು, ಸರ್ಕಾರವೇ ನಿರ್ದೇಶನವನ್ನು ನೀಡಿ ಪ್ರತಿಭಟನೆ ಮಾಡಿಸಿದೆ. ಶಾಸಕರೂ ಕೂಡ ಕುಮ್ಮಕ್ಕು ನೀಡಿದ್ದಾರೆ. ಸಂಪತ್ ಎನ್ನುವವನು ನನ್ನ ಕಾರಿಗೆ ಮೊಟ್ಟೆ ಎಸೆದಿದ್ದ. ಸಂಪತ್ ನನ್ನು ಶಾಸಕ ಅಪ್ಪಚ್ಚು ರಂಜನ್ ಬಿಡಿಸಿಕೊಂಡು ಬಂದಿದ್ದಾರೆ ಎಂದರು.

ಮಾಂಸ ತಿಂದು ದೇಗುಲಕ್ಕೆ ತೆರಳಿದ ವಿಚಾರ ಕುರಿತು ಸ್ಪಷ್ಟನೆ ನೀಡಿದ ಸಿದ್ಧರಾಮಯ್ಯ,  ಮಾಂಸ ತಿನ್ನುವುದು ಬಿಡುವುದು ಅವರವರ ವೈಯಕ್ತಿಕ ವಿಚಾರ. ಇದೊಂದು ಚರ್ಚೆ ಮಾಡುವ ವಿಚಾರವೇ ಅಲ್ಲ. ಮಡಿಕೇರಿಯಲ್ಲಿ ನಾನು ಮಾಂಸ ತಿಂದಿಲ್ಲ.  ಮಾಂಸ ತಿಂದು ದೇವಸ್ಥಾನಕ್ಕೆ ಹೋಗಿಲ್ಲ.  ನಾನು ಕೇವಲ ಅಕ್ಕಿರೊಟ್ಟಿ  ಕಳಲೆ ಊಟ ಮಾಡಿದ್ದೆ. ನಾಟಿಕೋಳಿ  ಮಾಂಸ ಮಾಡಿದ್ರು ನಾನು ತಿನ್ನಲಿಲ್ಲ ಎಂದು ಹೇಳಿದರು.

Key words: Adjournment – Congress- Madikeri Chalo-Former CM- Siddaramaiah

ENGLISH SUMMARY…

Cong. ‘Madikeri Chalo’ postponed – Former CM Siddaramaiah
Bengaluru, August 23, 2022 (www.justkannada.in): Leader of the opposition Siddaramaiah today informed that the Congress party’s ‘Madikeri Chalo’ has been postponed condemning the incident of hurling of egg at his car recently during his visit to Kodagu.
Addressing a press meet today, the former Chief Minister informed that the ‘Madikeri Chalo’ call given by the State Congress party has been postponed. “We won’t continue with the program. It is not my decision, it is the party’s decision. Protest should not be held violating the prohibition order. I respect the law of land. I won’t do it as the leader of the opposition. We won’t violate the law. The BJP people have done it intentionally. It is a political plot,” alleged.
“The BJP announced Janajagruti convention right after the next day we announced ‘Madikeri Chalo’, this is nothing but their drama. Deputy Commissioner’s orders mean government orders. As a responsible opposition, we will follow the government order. Hence, we have decided to postpone the protest that we had planned to be held in Kodagu district,” he said.
Keywords: Leader of the opposition Siddaramaiah/ Madikeri Chalo/ BJP