ಚಿತ್ರ ಬಹಿಷ್ಕರಿಸದಂತೆ ಅಭಿಮಾನಿಗಳಿಗೆ ಅಮೀರ್ ಖಾನ್ ಮನವಿ

ಬೆಂಗಳೂರು, ಆಗಸ್ಟ್ 02, 2022 (www.justkannada.in): ಅಮೀರ್ ಖಾನ್ ಹಾಗೂ ಕರೀನಾ ಕಪೂರ್ ಅಭಿನಯದ ಚಿತ್ರ ‘ಲಾಲ್ ಸಿಂಗ್ ಚಡ್ಡಾ’ ಇದೇ ತಿಂಗಳ 11ರಂದು ವಿಶ್ವದಾದ್ಯಂತ ತೆರೆ ಕಾಣಲಿದೆ.

ಈ ಮಧ್ಯೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ‘ಬಾಯ್ಕಾಟ್ ಲಾಲ್ ಸಿಂಗ್ ಚಡ್ಡಾ’ ಎಂಬ ಹ್ಯಾಶ್ ಟ್ಯಾಗ್ ಟ್ರೆಂಡ್ ಆಗಿದೆ.

ಈ ಕುರಿತಂತೆ ಮಾತನಾಡಿರುವ ಅಮೀರ್, ದಯವಿಟ್ಟು ನನ್ನ ಚಿತ್ರವನ್ನು ಬಾಯ್ಕಾಟ್ ಮಾಡಬೇಡಿ. ಚಿತ್ರ ಪ್ರೇಮಿಗಳೆಲ್ಲರೂ ಸಿನಿಮಾ ವೀಕ್ಷಿಸಿ ಎಂದು ಮನವಿ ಮಾಡಿದ್ದಾರೆ.

‘ಲಾಲ್ ಸಿಂಗ್ ಚಡ್ಡಾ’ ಹಾಲಿವುಡ್ ನ ಆಸ್ಕರ್ ವಿಜೇತ ಚಿತ್ರ ‘ಫಾರೆಸ್ಟ್ ಗಂಪ್’ ರಿಮೇಕ್ ಆಗಿದ್ದು, ಅಮೀರ್ ಖಾನ್ ಹಾಗೂ ಕರೀನಾ ಕಪೂರ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.