ವಿಶ್ವ ಟೆಸ್ಟ್ ಚಾಂಪಿಯನ್’ಶಿಪ್ ಫೈನಲ್ ಪಂದ್ಯದ 1 ಟಿಕೆಟ್ ದರ ಬರೋಬ್ಬರಿ 2 ಲಕ್ಷ ರೂಪಾಯಿ !

ಬೆಂಗಳೂರು, ಮೇ 28, 2021 (www.justkannada.in): ಸೌತಾಂಪ್ಟನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ನಾಲ್ಕು ಸಾವಿರ ಪ್ರೇಕ್ಷಕರಿಗೆ ಅವಕಾಶವಿದೆ.

ಅಂತಿಮ ಪಂದ್ಯದ ಬಗ್ಗೆ ಸಾಕಷ್ಟು ಕ್ರೇಜ್ ಇದ್ದು, ಟಿಕೆಟ್ ಗೆ ಬೇಡಿಕೆ ಹೆಚ್ಚಾಗಿದೆ. ಒಂದು ಟಿಕೆಟ್ ಗೆ ಬರೋಬ್ಬರಿ 2 ಲಕ್ಷ ರೂ.ಗೆ ಮಾರಾಟವಾಗುತ್ತಿದೆ.

ಐಸಿಸಿಯಿಂದ ನೇಮಕಗೊಂಡಿರುವ ಅಧಿಕೃತ ಟಿಕೆಟ್ ಏಜೆಂಟ್ ಕಂಪನಿಗಳ ಪ್ರಕಾರ, ಪ್ರತಿ ವಿಭಾಗದಲ್ಲೂ ಟಿಕೆಟ್ ಗೆ ಬೇಡಿಕೆ ಹೆಚ್ಚಿದೆ.

ಇಂಗ್ಲೆಂಡ್-ನ್ಯೂಜಿಲ್ಯಾಂಡ್ ವಿರುದ್ಧ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುವ ಎರಡನೇ ಟೆಸ್ಟ್ ಪಂದ್ಯದ ಮೊದಲ ಮೂರು ದಿನಗಳು 18000 ಪ್ರೇಕ್ಷಕರಿಗೆ ಭಾಗವಹಿಸಲು ಅವಕಾಶವಿದ್ದು, ಜೂನ್ 18ರಿಂದ ಪಂದ್ಯ ಶುರುವಾಗಲಿದೆ.