Saturday, August 22, 2026

BDA Apartments

Home Front Page ವೋಟರ್ ಐಡಿ ಪರಿಷ್ಕರಣೆ ಅಕ್ರಮ ಆರೋಪ ಸುಳ್ಳು –ಸಚಿವ ಅಶ್ವತ್ ನಾರಾಯಣ್ ಸ್ಪಷ್ಟನೆ.

ವೋಟರ್ ಐಡಿ ಪರಿಷ್ಕರಣೆ ಅಕ್ರಮ ಆರೋಪ ಸುಳ್ಳು –ಸಚಿವ ಅಶ್ವತ್ ನಾರಾಯಣ್ ಸ್ಪಷ್ಟನೆ.

ಬೆಂಗಳೂರು,ನವೆಂಬರ್,17,2022(www.justkannada.in): ವೋಟರ್ ಐಡಿ ಪರಿಷ್ಕರಣೆಯಲ್ಲಿ  ಅಕ್ರಮ  ನಡೆದಿದ್ದು ಎಂದು ಆರೋಪಿಸಿದ್ದ ಕಾಂಗ್ರೆಸ್ ನಾಯಕರಿಗೆ  ಸಚಿವ ಅಶ್ವಥ್ ನಾರಾಯಣ್ ತಿರುಗೇಟು ನೀಡಿದ್ದಾರೆ.

ಈ ಕುರಿತು ಸುದ್ಧಿಗೋಷ್ಠಿ ನಡೆಸಿ ಮಾತನಾಡಿ ಸ್ಪಷ್ಟನೆ ನೀಡಿರುವ ಸಚಿವ ಅಶ್ವತ್ ನಾರಾಯಣ್,  ಕಾಂಗ್ರೆಸ್ ನಿಂದ ಸುಳ್ಳು, ಆಧಾರ ರಹಿತ ಆರೋಪ. ಈ ಸಂಸ್ಥೆಗಳಿಗೂ ಸರ್ಕಾರಕ್ಕೂ ಯಾವುದೇ ಸಂಬಂಧ ಇಲ್ಲ. ಕೈ  ನಾಯಕರು ಏನೋ ಹೇಳಿಕೆ ಕೊಡಬೇಕಿತ್ತು ಕೊಟ್ಟಿದ್ದಾರೆ.  ಯಾರು ಏನು ತಪ್ಪು ಮಾಡಿದ್ದಾರೋ ಗೊತ್ತಿಲ್ಲ. ಯಾರೇ ತಪ್ಪು ಮಾಡಿದ್ದರೇ ತಪ್ಪು ತಪ್ಪೇ  ಈ ರೀತಿ ಸರ್ವೆ ಚುನಾವಣಾ ಆಯೋಗದ ಅಡಿ ನಡೆಯುತ್ತೆ ಎಂದರು.

ಕಾಂಗ್ರೆಸ್ ನಾಯಕರು ಭ್ರಷ್ಠಚಾರದಲ್ಲಿ ತುಂಬು ತುಳುಕಿದ್ದಾರೆ. ಈ ರೀತಿ ಆರೋಪ ಮಾಡಲು ಕಾಂಗ್ರೆಸ್ ನಾಯಕರಿಗೆ ನೈತಿಕತೆ ಇಲ್ಲ. ಹೊಂಬಾಳೆ ಸಂಸ್ಥೆ ಇದಕ್ಕೂ ಯಾವುದೇ ಸಂಬಂಧ ಇಲ್ಲ.  ಇವರಂತೂ ಒಳ್ಳೆಯದು ಮಾಡಲ್ಲ. ಒಳ್ಳೆಯದನ್ನು ಮಾಡಲು ಬಿಡಲ್ಲ. ತನಿಖೆ ಮಾಡಿಸಲು ಹೇಳಲು ನಾವು ಯಾರು..? ಇದು ಚುನಾವಣಾ ಆಯೋಗಕ್ಕೆ ಸಂಬಂಧಿಸಿದ ವಿಚಾರ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ಹೋಗಿ ದೂರು ನೀಡಲಿ ಎಂದು ಅಶ್ವಥ್ ನಾರಾಯಣ್ ಟಾಂಗ್ ನೀಡಿದರು.

ವೋಟರ್ ಐಡಿ ಪರಿಷ್ಕರಣೆ ಅಕ್ರಮದಲ್ಲಿ ನಾನು ಭಾಗಿಯಾಗಿಲ್ಲ. ರವಿಕುಮಾರ್ ಅನ್ನೋರು ನನಗೆ ಗೊತ್ತು. ರವಿ ಕುಮಾರ್ ನಮ್ಮ ಕ್ಷೇತ್ರದವರು.  ಚಿಲುಮೆ ಸಂಸ್ಥೆಯವರು ಏನು ಅಕ್ರಮ ಮಾಡಿದ್ದಾರೋ ಗೊತ್ತಿಲ್ಲ.  ಚಿಲುಮೆ ಸಂಸ್ಥೆಗೆ ಅವಕಾಶ ಕೊಟ್ಟಿದ್ದು ಚುನಾವಣಾ ಆಯೋಗ. ಇದಕ್ಕೂ ಸರ್ಕಾರಕ್ಕೂ ಯಾವುದೇ ಸಂಬಂಧ ಇಲ್ಲ ಎಂದರು.

Key words: Voter ID-revision- illegal-allegation-Minister-Aswath Narayan