Monday, October 5, 2026

BDA Apartments

ಪ್ರಧಾನಿ ಮೋದಿ ಭೇಟಿಯಾಗಿ BDA JK_Adv BDA Adv
Home Front Page ಕಾಂಗ್ರೆಸ್ ನವರದ್ದು ಆಧಾರ ರಹಿತ ಆರೋಪ: ದೂರು ನೀಡಿದ್ರೆ ಸತ್ಯಾಂಶ ಹೊರಬರುತ್ತೆ – ಸಿಎಂ ಬೊಮ್ಮಾಯಿ.

ಕಾಂಗ್ರೆಸ್ ನವರದ್ದು ಆಧಾರ ರಹಿತ ಆರೋಪ: ದೂರು ನೀಡಿದ್ರೆ ಸತ್ಯಾಂಶ ಹೊರಬರುತ್ತೆ – ಸಿಎಂ ಬೊಮ್ಮಾಯಿ.

ಬೆಂಗಳೂರು,ನವೆಂಬರ್,17,2022(www.justkannada.in):  ವೋಟರ್ ಐಡಿ ಪರಿಷ್ಕರಣೆಯಲ್ಲಿ ಅಕ್ರಮವೆಸಗಲಾಗಿದೆ. ಮತದಾರರ ಮಾಹಿತಿ ಸಂಗ್ರಹಿಸಲಾಗಿದೆ. ಈ ಅಕ್ರಮದಲ್ಲಿ ಸಿಎಂ ಅವರೇ ಭಾಗಿಯಾಗಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕರಿಗೆ ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ನಾಯಕರು ಈ ವಿಚಾರದಲ್ಲಿ ದಿವಾಳಿಯಾಗಿದ್ದಾರೆ. ಇದು ಆಧಾರ ರಹಿತ ಆರೋಪ. ಬೆಂಗಳೂರಿನಲ್ಲಿ ಮತದಾರರಿಗೆ ಅರಿವು ಮೂಡಿಸುವ ಕಾರ್ಯ ನಡೆಯುತ್ತದೆ. ಹೀಗಾಗಿ ಚಿಲುಮೆ ಸಂಸ್ಥೆಗೆ ಬಿಬಿಎಂಪಿ ಚುನಾವಣಾ ಆಯೋಗ ಅನುಮತಿ ನೀಡಿದೆ.  2018ರಲ್ಲೂ ಚಿಲುಮೆ ಸಂಸ್ಥೆಗೆ ಅನುಮತಿ ನೀಡಲಾಗಿತ್ತು ಎಂದರು.ಕಾಂಗ್ರೆಸ್ ನವರದ್ದು ಆಧಾರ ರಹಿತ ಆರೋಪ: ದೂರು ನೀಡಿದ್ರೆ ಸತ್ಯಾಂಶ ಹೊರಬರುತ್ತ...

ಕಾಂಗ್ರೆಸ್ ನಾಯಕರು ದೂರು ನೀಡಿದ್ರೆ ತನಿಖೆಯಾಗಲಿದೆ. ತನಿಖೆ ನಡೆದ ಮೇಲೆ ನಿಜ ಸತ್ಯಾಂಶ ಹೊರಬರಲಿದೆ. ತಪ್ಪು ನಡೆದಿದ್ದರೇ ಈ ಬಗ್ಗೆ ಕಮಿಷನರ್ ಗೆ  ದೂರು ನೀಡಲಿ ನಾನೂ ಕೂಡ ತನಿಖೆ ನಡೆಸುವಂತೆ ಸೂಚಿಸುವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

Key words: Baseless -allegation –Congress-complaint-CM Bommai.