Wednesday, October 7, 2026

BDA Apartments

Home Crime ಬಗೆದಷ್ಟು ಬಯಲಿಗೆ ‘ಚಿನ್ನತಂಬಿ’ಯ ಕರ್ಮಕಾಂಡ: ಮತ್ತೆರೆಡು FIR ದಾಖಲು

ಬಗೆದಷ್ಟು ಬಯಲಿಗೆ ‘ಚಿನ್ನತಂಬಿ’ಯ ಕರ್ಮಕಾಂಡ: ಮತ್ತೆರೆಡು FIR ದಾಖಲು

ಮೈಸೂರು,ಆಗಸ್ಟ್,22,2026 (www.justkannada.in): ಚಿನ್ನ ಗಿರವಿ ಇಟ್ಟುಕೊಂಡು ನೂರಾರು ಗ್ರಾಹಕರಿಗೆ ವಂಚಿಸಿರುವ ಸುಂದರ್‌ ರಾಜ್ ಅಲಿಯಾಸ್ ಚಿನ್ನತಂಬಿಯ ಕರ್ಮಕಾಂಡ ಬಗೆದಷ್ಟು ಬಯಲಿಗೆ ಬರುತ್ತಿದೆ.

ಗ್ರಾಹಕರಿಗೆ ಚಿನ್ನಾಭರಣ ವಂಚನೆ, ಕಿರುಕುಳ ಕೊಟ್ಟಿರುವ ಆರೋಪ ಹೊತ್ತಿರುವ ಚಿನ್ನತಂಬಿ ವಿರುದ್ಧ ಪ್ರತಿ ದಿನ ಎಫ್ ಐಆರ್ ದಾಖಲಾಗುತ್ತಲೇ ಇದ್ದು ಇದೀಗ ಇಂದೂ ಸಹ ಎರಡು ಎಫ್ ಐ ಆರ್ ಗಳು ದಾಖಲಾಗಿವೆ.

ಬೆಂಗಳೂರಿನ ಗಂಗೋಡಹಳ್ಳಿ ನಿವಾಸಿ ಗೀತಾ ಮತ್ತು ತುಮಕೂರಿನ ಕೊರಟಗೆರೆಯ ಅಗ್ರಹಾರದ ಜಿ.ಆರ್.ಭೀಮೇಶ್ ಹಾಗೂ ಅನಿತಾ ಎಂಬುವವರು ದೂರು  ನೀಡಿದ್ದು ಈ ಸಂಬಂಧ ಮೈಸೂರಿನ ನಜರಬಾದ್ ಹಾಗೂ ಕುವೆಂಪುನಗರ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ಬಗೆದಷ್ಟು ಬಯಲಿಗೆ ‘ಚಿನ್ನತಂಬಿ’ಯ ಕರ್ಮಕಾಂಡ: ಮತ್ತೆರೆಡು FIR ದಾಖಲು chinnathambi

ಮಹಿಳೆಗೆ ಲೈಂಗಿಕ ಕಿರುಕುಳ, ಮಹಿಳೆಯ ಚಿನ್ನ ಕರಗಿಸಿ, ಅಕ್ರಮ ಬಂಧನ, ರೌಡಿಗಳಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ  ಆರೋಪ ಚಿನ್ನತಂಬಿಯ ಮೇಲಿದೆ.ಬಗೆದಷ್ಟು ಬಯಲಿಗೆ ‘ಚಿನ್ನತಂಬಿ’ಯ ಕರ್ಮಕಾಂಡ jk02_new jk02 new

Key words: Mysore, Chinnathambi, Two more, FIR,  filed