Friday, October 16, 2026

Dasara Wishes

Happy Dasara
Home Cinema ಕಾಂತಾರ ಸಿನಿಮಾದ ಹಾಡಿನ ಟ್ಯೂನ್ ಕಾಪಿ?!

ಕಾಂತಾರ ಸಿನಿಮಾದ ಹಾಡಿನ ಟ್ಯೂನ್ ಕಾಪಿ?!

ಬೆಂಗಳೂರು, ಅಕ್ಟೋಬರ್ 13, 2022 (www.justkannada.in): ರಿಷಬ್‌ ಶೆಟ್ಟಿ ನಟನೆ ಹಾಗೂ ನಿರ್ದೇಶನದ ಕಾಂತಾರ ಸಿನಿಮಾದಲ್ಲಿರುವ ಎರಡು ಹಾಡುಗಳ ಟ್ಯೂನ್‌ ಕಾಪಿ ಮಾಡಲಾಗಿದೆ ಎಂಬ  ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಬಹಳಷ್ಟು ಜನ ವರಾಹ ರೂಪಂ ಹಾಡುಗಳ ಟ್ಯೂನ್‌ಅನ್ನು ಮರಾಠಿ ಹಾಗೂ ಮಲಯಾಳಂ ಹಾಡುಗಳಿಂದ ಕಾಪಿ ಆಗಿದೆ ಎಂದು ಹೇಳಲಾಗುತ್ತಿದೆ.

ಮಲಯಾಳಂ ಹಾಗೂ ಮರಾಠಿ ಹಾಡುಗಳ ಒರಿಜಿನಲ್ ಕ್ಲಿಪ್​ಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಶೇರ್ ಮಾಡುತ್ತಿದ್ದಾರೆ.

ಅಂದಹಾಗೆ ಹೊಂಬಾಳೆ ಯುಟ್ಯೂಬ್​ ಚಾನೆಲ್​ನಲ್ಲಿ ವರಾಹ ರೂಪಂ ಹಾಡನ್ನು ರಿಲೀಸ್​ ಮಾಡಿಲ್ಲ. ಅಜನೀಶ್​ ಲೋಕನಾಥ್​ ತಮ್ಮ ವೈಯಕ್ತಿಕ ಚಾನೆಲ್​ನಲ್ಲಿ ಈ ಸಾಂಗ್​ ರಿಲೀಸ್ ಮಾಡಿದ್ದಾರೆ.

ಈ ಟ್ಯೂನ್​ ಅನ್ನು ಚಿತ್ರತಂಡ ಹಣ ಕೊಟ್ಟು ಕೂಡ ಖರೀದಿ ಮಾಡಿರಬಹುದು. ಈ ಬಗ್ಗೆ ಯಾವುದೇ ಸ್ಪಷ್ಟನೆ ಕೊಟ್ಟಿಲ್ಲ.