ಮದುವೆ ಬಳಿಕ ‘ಹೆಡ್ ಬುಷ್’ ಮೂಲಕ ಬೆಳ್ಳಿ ತೆರೆಗೆ ಬಂದ ಶ್ರುತಿ ಹರಿಹರನ್

ಬೆಂಗಳೂರು, ಅಕ್ಟೋಬರ್ 13, 2022 (www.justkannada.in): ನಟಿ ಶ್ರುತಿ ಹರಿಹರನ್ ಚಿಕ್ಕ ಗ್ಯಾಪ್​ ಬಳಿಕ ಮತ್ತೆ ಹಿರಿ ತೆರೆಗೆ ಬಂದಿದ್ದಾರೆ.

ಹೌದು. ಮದುವೆ ಬಳಿಕ  ‘ಹೆಡ್​ ಬುಷ್​’ ಚಿತ್ರದಲ್ಲಿ ಶ್ರುತಿ ಹರಿಹರನ್ ಕಾಣಿಸಿಕೊಂಡಿದ್ದಾರೆ. ಇದರ ಜತೆಗೆ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

ಡಾಲಿ ಧನಂಜಯ್​ ಮುಖ್ಯ ಭೂಮಿಕೆ ನಿಭಾಯಿಸಿರುವ ‘ಹೆಡ್​ ಬುಷ್​’ ಚಿತ್ರದಲ್ಲಿ ಶ್ರುತಿ ಹರಿಹರನ್​ ನಟಿಸಿದ್ದಾರೆ.

ಜತೆಗೆ ಮದುವೆಯು ತಮ್ಮ ವೃತ್ತಿಜೀವನದ ಮೇಲೆ ಏನೂ ಪರಿಣಾಮ ಬೀರಿಲ್ಲ ಎಂದು ಹೇಳಿದ್ದಾರೆ.

ಮಗು ಜನಿಸಿದ ಬಳಿಕ ಜೀವನದಲ್ಲಿ ಬದಲಾವಣೆ ಆಯ್ತು. ಸಿನಿಮಾ ಮಾಡುವಾಗ ನನ್ನ ಅರ್ಧ ಮನಸ್ಸು ಮಗು ಕಡೆಗೆ ಇರುತ್ತದೆ’ ಎಂದು ಶೃತಿ ಹರಿಹರನ್ ಹೇಳಿಕೊಂಡಿದ್ದಾರೆ.