Sunday, August 23, 2026

BDA Apartments

Home Cinema ನಯನತಾರಾ- ವಿಘ್ನೇಶ್ ವಿರುದ್ಧ ತನಿಖೆಗೆ ತಮಿಳುನಾಡು ಸರ್ಕಾರ ಆದೇಶ

ನಯನತಾರಾ- ವಿಘ್ನೇಶ್ ವಿರುದ್ಧ ತನಿಖೆಗೆ ತಮಿಳುನಾಡು ಸರ್ಕಾರ ಆದೇಶ

ಬೆಂಗಳೂರು, ಅಕ್ಟೋಬರ್ 11, 2022 (www.justkannada.in): ಅವಳಿ ಮಕ್ಕಳಿಗೆ ಪೋಷಕರಾಗಿರುವ ನಯನತಾರಾ- ವಿಘ್ನೇಶ್ ಶಿವನ್ ದಂಪತಿಗಳಿಗೆ ಇದೀಗ ತಮಿಳುನಾಡು ಸರ್ಕಾರ ಶಾಕ್ ನೀಡಿದೆ.

ನಟಿ ನಯನತಾರ ಹಾಗೂ ವಿಘ್ನೇಶ್ ಶಿವನ್ ಬಾಡಿಗೆ ತಾಯ್ತನದ ಮೂಲಕ ತಾವು ಪೋಷಕರಾಗುತ್ತಿರುವ ವಿಷಯವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದಾದ ಬೆನ್ನಲ್ಲೆ ತನಿಖೆಗೆ ಸರಕಾರ ಆದೇಶಿಸಿದೆ.

ಅಂದಹಾಗೆ ಬಾಡಿಗೆ ತಾಯ್ತನದ ಕುರಿತು ಸರಕಾರವು ಹಲವು ನಿಯಮಗಳನ್ನು ರೂಪಿಸಿದೆ. ಈ ನಿಯಮಗಳನ್ನು ನಯನತಾರಾ ಮತ್ತು ವಿಘ್ನೇಶ್ ಶಿವನ್ ಗಾಳಿಗೆ ತೂರಿದ್ದಾರೆ ಎನ್ನಲಾಗುತ್ತಿದೆ.

ಕಳೆದ ವರ್ಷ ಡಿಸೆಂಬರ್ ನಲ್ಲಿ ಬಾಡಿಗೆ ತಾಯ್ತನ ನಿಯಂತ್ರಣ ಕಾಯ್ದೆಯನ್ನು ಜಾರಿ ಮಾಡಲಾಗಿದೆ. ಬಾಡಿಗೆ ತಾಯಿ ಆರೋಗ್ಯವಾಗಿರಬೇಕು, ಆಕೆಯ ವಯಸ್ಸು 21-35ರ ಅಂತರದಲ್ಲಿ ಇರಬೇಕು. ಒಂದೇ ಸಲ ಬಾಡಿಗೆ ತಾಯಿ ಆಗಲು ಸಾಧ್ಯ ಹಾಗೂ ವಾಣಿಜ್ಯ ಬಾಡಿಗೆ ತಾಯ್ತನದ ಮೇಲೆ ನಿರ್ಬಂಧ ಹೇರಲಾಗಿದೆ.