ನಿಜವಾದ ಅಲ್ಪಸಂಖ್ಯಾತರು ಅಂದ್ರೆ ಮುಸ್ಲೀಂರಲ್ಲ, ಬ್ರಾಹ್ಮಣರು – ಶಾಸಕ ಬಸನಗೌಡ ಪಾಟೀಲ್ ಯತ್ನಾಳ್.

0
1

ವಿಜಯಪುರ,ಅಕ್ಟೋಬರ್,10,2022(www.justkannada.in): ನಿಜವಾದ ಅಲ್ಪಸಂಖ್ಯಾತರು ಮುಸ್ಲೀಂರಲ್ಲ. ಬ್ರಾಹ್ಮಣರು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್,  ಬ್ರಾಹ್ಮಣ ಸಮುದಾಯಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ಸಿಗಬೇಕು.  ಜನಸಂಖ್ಯೆಯಲ್ಲಿ  ಬ್ರಾಹ್ಮಣರು ಕೇವಲ 2ರಿಂದ 3ರಷ್ಟಿದ್ದಾರೆ.  ದೇಶದ ನಿಜವಾದ ಅಲ್ಪಸಂಖ್ಯಾತರು ಅಂದ್ರೆ ಬ್ರಾಹ್ಮಣರು ಹೀಗಾಗಿ ಅಲ್ಪಸಂಖ್ಯಾತ ಪಟ್ಟಿಗೆ ಬ್ರಾಹ್ಮಣ ಸಮುದಾಯವನ್ನ ಸೇರಿಸಬೇಕು ಎಂದು ಆಗ್ರಹಿಸಿದರು.

ಮುಸ್ಲೀಂ ಸಮುದಾಯದವರು ಅಲ್ಪಸಂಖ್ಯಾತರು ಅಲ್ಲವೆ ಅಲ್ಲ.  ಒಂದು ಜನಾಂಗದಷ್ಟಿರುವ ಮುಸ್ಲೀಂರು ಹೇಗೆ ಅಲ್ಪಸಂಖ್ಯಾತರಾಗುತ್ತಾರೆ  ದೇಶದ್ರೋಹಿ ಕೆಲಸ, ಪಾಕಿಸ್ತಾನದ ಪರಮಾತನಾಡುತ್ತಿದ್ದಾರೆ. ಅವರಿಗೇಕೆ ಸೌಲಭ್ಯ ಎಂದು ಯತ್ನಾಳ್ ಹೇಳಿದ್ದಾರೆ.

Key words:   real minorities – Brahmins-MLA- Basan Gowda Patil Yatnal.