Wednesday, August 19, 2026

BDA Apartments

Home Cinema ಎದೆನೋವು ಹಿನ್ನೆಲೆ ಹಂಸಲೇಖ ಆಸ್ಪತ್ರೆಗೆ ದಾಖಲು: ಆತಂಕದ ಅಗತ್ಯವಿಲ್ಲ ಎಂದ ವೈದ್ಯರು

ಎದೆನೋವು ಹಿನ್ನೆಲೆ ಹಂಸಲೇಖ ಆಸ್ಪತ್ರೆಗೆ ದಾಖಲು: ಆತಂಕದ ಅಗತ್ಯವಿಲ್ಲ ಎಂದ ವೈದ್ಯರು

ಬೆಂಗಳೂರು, ಅಕ್ಟೋಬರ್ 10, 2022 (www.justkannada.in): ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಂಗೀತ ನಿರ್ದೇಶಕ, ಹಂಸಲೇಖ ಸೋಮವಾರ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬೆಂಗಳೂರಿನ ರಾಜಾಜಿನಗರದಲ್ಲಿ ಅವರ ಮನೆಯ ಸಮೀಪ ಅಪೋಲೊ ಆಸ್ಪತ್ರೆಗೆ ಹಂಸಲೇಖ ಅವರನ್ನು ದಾಖಲಿಸಲಾಗಿದೆ.

ಗ್ಯಾಸ್ಟ್ರಿಕ್ ಸಮಸ್ಯೆಯಿಂದಾಗಿ ಹಂಸಲೇಖ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು, ಆತಂಕದ ಅಗತ್ಯವಿಲ್ಲ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಈ ಹಿಂದೆ ಹಂಸಲೇಖ ಒಪನ್ ಹಾರ್ಟ್ ಸರ್ಜರಿಗೆ ಒಳಗಾಗಿದ್ದರು. ವೈದ್ಯರ ಸಲಹೆ ಮೇರೆಗೆ ಸೋಮವಾರ ಆಸ್ಪತ್ರೆಯಲ್ಲಿ ಉಳಿದುಕೊಂಡು ಮಂಗಳವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಲಿದ್ದಾರೆ ಎನ್ನಲಾಗಿದೆ.