‘ಕಾಂತಾರ’ ಮಲಯಾಳಂ ಆವೃತ್ತಿ ರಿಲೀಸ್ ಮಾಡುತ್ತಿದ್ದಾರೆ ಪೃಥ್ವಿರಾಜ್

ಬೆಂಗಳೂರು, ಅಕ್ಟೋಬರ್ 10, 2022 (www.justkannada.in): ಸಾಕಷ್ಟು ಸದ್ದು ಮಾಡುತ್ತಿರುವ ಕಾಂತಾರ ಮಲಯಾಳಂ ಆವೃತ್ತಿ ಕೇರಳದಾದ್ಯಂತ ಬಿಡುಗಡೆ ಆಗಲಿದೆ.

ನಟ ಪೃಥ್ವಿರಾಜ್ ಸುಕುಮಾರನ್ ಅವರ ಬ್ಯಾನರ್ ಪೃಥ್ವಿರಾಜ್ ಪ್ರೊಡಕ್ಷನ್ಸ್ ಅಡಿ ಕಾಂತಾರ ಕೇರಳದಲ್ಲಿ ರಿಲೀಸ್ ಆಗಲಿದೆ.

ಹೌದು. ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರ ಕಾಂತಾರ ಚಿತ್ರ  ಎಲ್ಲೆಡೆಯಿಂದ ಅದ್ಭುತ ಪ್ರತಿಕ್ರಿಯೆ ಪಡೆಯುತ್ತಲೇ ಇದೆ. ಹಿಂದಿ ಬಳಿಕ ಇದೀಗ ಮಲಯಾಳಂನಲ್ಲೂ ರಿಲೀಸ್ ಆಗುತ್ತಿದೆ.

ನಟ ಪೃಥ್ವಿರಾಜ್ ಸುಕುಮಾರನ್ ಅವರ ಬ್ಯಾನರ್ ಪೃಥ್ವಿರಾಜ್ ಪ್ರೊಡಕ್ಷನ್ಸ್ ಮಲಯಾಳಂ ಆವೃತ್ತಿಯನ್ನು ಕೇರಳದಾದ್ಯಂತ ಬಿಡುಗಡೆ ಮಾಡಲಿದೆ.

ಈ ಹಿಂದೆ ಪೃಥ್ವಿರಾಜ್ ಕೂಡ ‘ಕಾಂತಾರ’ ಸಿನಿಮಾವನ್ನು ಹೊಗಳಿ ಟ್ವೀಟ್ ಮಾಡಿದ್ದರು