Thursday, September 24, 2026

BDA Apartments

ಜೆಡಿಎಸ್ ಪಕ್ಷದಿಂದ ಸಿಎಂ ಇಬ್ರಾಹಿಂ ಅಧಿಕೃತ ಉಚ್ಚಾಟನೆ BDA JK_Adv BDA Adv
Home Crime ಪೋಕ್ಸೋ ಪ್ರಕರಣ: ಮುರುಘಾ ಶ್ರೀಗೆ ಮತ್ತೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

ಪೋಕ್ಸೋ ಪ್ರಕರಣ: ಮುರುಘಾ ಶ್ರೀಗೆ ಮತ್ತೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

ಚಿತ್ರದುರ್ಗ,ಸೆಪ್ಟಂಬರ್,27,2022(www.justkannada.in): ಅಪ್ರಾಪ್ತ ವಿದ್ಯಾರ್ಥಿನೀಯರ  ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ  ಬಂಧಿತರಾಗಿರುವ  ಚಿತ್ರದುರ್ಗದ ಮುರುಘಾ ಮಠದ  ಶಿವಮೂರ್ತಿ ಶ್ರೀಗಳಿಗೆ ಮತ್ತೆ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ.

ಮತ್ತೆ ಮುರುಘಾಶ್ರೀಗಳಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. ಅ.10ರವರೆಗೆ ನ್ಯಾಯಾಂಗ ವಿಧಿಸಿ ಚಿತ್ರದುರ್ಗದ 2ನೇ ಜಿಲ್ಲಾ ಹೆಚ್ಚುವರಿ ಸೆಷನ್ಸ್​​ ನ್ಯಾಯಾಲಯ ಆದೇಶ ಹೊರಡಿಸಿದೆ.

ಆರೋಪಿ ನಂಬರ್​ 2 ಲೇಡಿ ವಾರ್ಡನ್​​ ಗೂ 14ದಿನ ನ್ಯಾಯಾಂಗ ಬಂಧನ ವಿಸ್ತರಿಸಿ ಆದೇಶ ನೀಡಿದೆ. ಮುರುಘಾ ಶ್ರೀಗಳಿಗೆ ನ್ಯಾಯಾಂಗ ಬಂಧನ ವಿಸ್ತರಣೆ ಹಿನ್ನೆಲೆ ಪೊಲೀಸರು ಚಿತ್ರದುರ್ಗದ ಜಿಲ್ಲಾ ಕಾರಾಗೃಹಕ್ಕೆ ಕರೆದೊಯ್ದಿದ್ದಾರೆ.

ಅಪ್ರಾಪ್ತ ವಿದ್ಯಾರ್ಥಿನೀಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದ  ಮೇಲೆ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣ ಸ್ವಾಮೀಜಿಯ ನ್ಯಾಯಾಂಗ ಬಂಧನ ಸೆಪ್ಟೆಂಬರ್ 14ರಿಂದ ವಿಸ್ತರಣೆಯಾಗಿತ್ತು. ನ್ಯಾಯಾಂಗ ಬಂಧನದ ಅವಧಿ ಮುಕ್ತಾಯಗೊಂಡ ಹಿನ್ನೆಲೆ ಚಿತ್ರದುರ್ಗ ಜಿಲ್ಲಾ ಕೋರ್ಟ್​ಗೆ ಹಾಜರು ಪಡಿಸಲಾಗಿತ್ತು.

Key words: Judicial custody- extended -again – Muruga Shri.