ಬಿಜೆಪಿ ಸರ್ಕಾರ 40% ಕಮಿಷನ್​​ ಸರ್ಕಾರ: ಇದರಿಂದ ರಾಜ್ಯ, ದೇಶಕ್ಕೆ ಕೆಟ್ಟ ಹೆಸರು- ಡಿ.ಕೆ ಶಿವಕುಮಾರ್ ವಾಗ್ದಾಳಿ.

ಚಿತ್ರದುರ್ಗ,ಸೆಪ್ಟಂಬರ್,27,2022(www.justkannada.in):  ರಾಜ್ಯ ಬಿಜೆಪಿ ಸರ್ಕಾರ 40% ಕಮಿಷನ್​​ ಸರ್ಕಾರವಾಗಿದೆ. ಈ ಸರ್ಕಾರದಿಂದ ರಾಜ್ಯ, ದೇಶಕ್ಕೆ ಕೆಟ್ಟ ಹೆಸರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕಿಡಿಕಾರಿದರು.

ಚಿತ್ರದುರ್ಗದಲ್ಲಿ ಇಂದು ಮಾತನಾಡಿದ ಡಿ.ಕೆ ಶಿವಕುಮಾರ್, ಯಾವ ವಿಚಾರಣೆಯಿಂದ ನನ್ನ ಏನೂ ಮಾಡಲಾಗಲ್ಲ. 3 ವರ್ಷದಿಂದ ನನನ್ನು ಏನೂ ಮಾಡಲು ಆಗಿಲ್ಲ. ಮುಂದೇನೂ ನನ್ನನ್ನ ಏನೂ ಮಾಡುವುದಕ್ಕೆ ಆಗಲ್ಲ. ನಮ್ಮ ಪಕ್ಷದ ಶಾಸಕರನ್ನ ರಕ್ಷಿಸಿದ್ದಕ್ಕೆ ಅಧಿಕಾರ ದುರ್ಬಳಕೆ ಮಾಡಿಕೊಂಡು ಕೇಸ್ ಹಾಕಿದ್ದಾರೆ ಎಂದು ಕಿಡಿಕಾರಿದರು.

ಬಿಜೆಪಿಗೆ 40% ಕಮಿಷನ್, ಲಂಚ, ಮಂಚ ಮೂಲಭೂತ ಬಳುವಳಿ. ನನಗೆ ಅಶೋಕ್​ ಹಾಗೂ ಯಾರು ಹೇಳುವ ಅಗತ್ಯವಿಲ್ಲ. ಜನ ಸರ್ಕಾರಕ್ಕೆ ಭ್ರಷ್ಟ ಸರ್ಕಾರ ಎಂಬ ಗಿಫ್ಟ್ ಕೊಟ್ಟಿದ್ದಾರೆ. ಭ್ರಷ್ಟ ಸರ್ಕಾರ ಎಂಬುದನ್ನ ತೊಳೆದು ರಾಜ್ಯದ ಗೌರವ ಉಳಿಸಲಿ  ಎಂದು ಟಾಂಗ್ ನೀಡಿದರು.

ಹಾಗೆಯೇ ಭಾರತ್ ಜೋಡೋ ಅಲ್ಲ, ಕಾಂಗ್ರೆಸ್ ಜೋಡೋ ಎಂದು ಟೀಕಿಸಿದ್ದ ಬಿಜೆಪಿಗೆ ತಿರುಗೇಟು ನೀಡಿದ ಡಿ.ಕೆ ಶಿವಕುಮಾರ್, ನಮ್ಮ ವಿಚಾರ ನಾವೇನಾದರೂ ಮಾಡಿಕೊಳ್ಳುತ್ತೇವೆ ಬಿಡಿ ಎಂದು ಕಿಡಿಕಾರಿದರು.

Key words: BJP Govt -40% Commission – Bad Name- DK Shivakumar