Sunday, October 18, 2026

Dasara Wishes

Happy Dasara
Home Crime ಮೈಸೂರಿನಲ್ಲಿ ಎನ್ ಐಎ ದಾಳಿ: ಪಿಎಫ್ಐ ಮಾಜಿ ಜಿಲ್ಲಾಧ್ಯಕ್ಷನ ಬಂಧನ, ಕಾರ್ಯಕರ್ತರಿಂದ ಪ್ರತಿಭಟನೆ.

ಮೈಸೂರಿನಲ್ಲಿ ಎನ್ ಐಎ ದಾಳಿ: ಪಿಎಫ್ಐ ಮಾಜಿ ಜಿಲ್ಲಾಧ್ಯಕ್ಷನ ಬಂಧನ, ಕಾರ್ಯಕರ್ತರಿಂದ ಪ್ರತಿಭಟನೆ.

ಮೈಸೂರು,ಸೆಪ್ಟಂಬರ್,22,2022(www.justkannada.in):  ದೇಶಾದ್ಯಂತ ಪಿಎಫ್ ಐ ಮತ್ತು ಎಸ್ ಡಿಪಿಐ ಕಚೇರಿಗಳ ಮೇಲೆ ಎನ್ ಐಎ ಇಂದು ದಾಳಿ ನಡೆಸಿದ್ದು , ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ಎನ್‌ಐಎ ದಾಳಿಯಾಗಿದೆ.

ಶಾಂತಿ ನಗರದಲ್ಲಿ ಪಿಎಫ್ ಐ ಸಂಘಟನೆ ಜಿಲ್ಲಾ ಮಾಜಿ ಅಧ್ಯಕ್ಷ ಎನ್‌ ಐಎ ಮೌಲಾನ ಮಹಮ್ಮದ್ ಕಲಿಮುಲ್ಲಾ ವಶಕ್ಕೆ ಪಡೆದ ಎನ್ ಐಎ ನಂತರ ಎರಡು ಗಂಟೆಗಳ ಕಾಲ‌ ಸಿಸಿಬಿ ಕಚೇರಿಯಲ್ಲಿ ವಿಚಾರಣೆ ನಡೆಸಿದರು. ಬಳಿಕ ಪೊಲೀಸರು ಬೆಂಗಳೂರಿಗೆ ಆರೋಪಿಯನ್ನ ಕರೆದೊಯ್ದರು.

ಪಿಎಫ್ಐ,ಎಸ್ಡಿಪಿಐ ಸಂಘಟನೆಯ ಮನೆ ಮೇಲೆ ಎನ್ ಐಎ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ  ಬಂಧಿತ ಆರೋಪಿ ಮಹಮ್ಮದ್ ಕಲಿಮುಲ್ಲ ಕುಟುಂಬಸ್ಥರೊಬ್ಬರು,  ನಮ್ಮ ಮನೆಯ ಮೇಲೆ ತಡ ರಾತ್ರಿ ಏಕಾಏಕಿ ಎನ್ ಐಎ ಅಧಿಕಾರಿಗಳು ಅಂಥ ಬಂದು ದಾಳಿ ಮಾಡಿದರು. ನಮ್ಮ ಮನೆಯನ್ನೆಲ್ಲ ಹುಡುಕಾಟ ಮಾಡಿ ನಮ್ಮ ಮನೆಯಲ್ಲಿದ್ದ ಕೆಲ ದಾಖಲೆಯನ್ನು ವಶಪಡಿಸಿಕೊಂಡರು . ನಮ್ಮ ಭಾವಅವರನ್ನು ಬಂಧಿಸಿ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ. ನಮ್ಮ ಭಾವ ಅವರು  ಯಾವುದೇ ರೀತಿಯ  ದೇಶದ್ರೋಹ  ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲ. ಇದು ಪಿಎಫ್ಐ ,ಎಸ್ಡಿಪಿಐ ಸಂಘಟನೆಯನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ನಾವು ಇದಕ್ಕೆ ಎದುರೋದಿಲ್ಲ. ಇದು ಸರ್ಕಾರದ ದುರುದ್ದೇಶ ಪೂರ್ವಕ ಕೃತ್ಯ. ಅವರು ನಿರಪರಾಧಿ ಅವರು ಆರೋಪ ಮುಕ್ತವಾಗಿ ಬರುತ್ತಾರೆ ಎಂದರು.

ಸಿಸಿಬಿ ಕಚೇರಿಗೆ ಮುತ್ತಿಗೆ ಹಾಕಿಪ್ರತಿಭಟಿಸಿದ ಪಿಎಫ್ಐ ಕಾರ್ಯಕರ್ತರು.

ಮೈಸೂರಿನ ಪಿಎಫ್ಐ ಮಾಜಿ ಜಿಲ್ಲಾಧ್ಯಕ್ಷ ಕಲೀಮುದ್ದೀನ್ ಬಂಧಿಸಿದ ಹಿನ್ನೆಲೆ ಸಂತ ಫಿಲೋಮಿನಾ ಚರ್ಚ್ ಬಳಿ ಇರುವ ಸಿಸಿಬಿ ಕಚೇರಿಗೆ ಮುತ್ತಿಗೆ ಹಾಕಿ ಪಿಎಫ್ ಐ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾದರು.

ಕಲೀಮುದ್ದೀನ್ ಬಂಧನ ಸುದ್ದಿ ತಿಳಿಯುತ್ತಿದ್ದಂತೆ ಸಿಸಿಬಿ ಕಚೇರಿಗೆ ಮುಂದೆ ಜಮಾಯಿಸಿದ ಬೆಂಬಲಿಗರು ಪೊಲೀಸರ ವಿರುದ್ದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪೊಲೀಸರು ಕಲೀಮುದ್ದೀನ್‌ ರನ್ನು ಪೊಲೀಸ್ ಭದ್ರತೆಯಲ್ಲಿ ಜೀಪಿನಲ್ಲಿ ಕರೆದುಕೊಂಡು ಹೋದರು. ಆದರೂ ಸಹ ಪಿಎಫ್ಐ ಕಾರ್ಯಕರ್ತರು ಪೊಲೀಸ್ ಜೀಪನ್ನು ಅಡ್ಡಗಟ್ಟಿದ್ದು ಈ ವೇಳೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು.

Key words: NIA-raid – Mysore- Former- PFI- district –president- arrested