Thursday, August 13, 2026

BDA Apartments

Home Cinema ಅವರು ಬಯಸಿದಂತೆ ಇರಲಿಲ್ಲ ಎಂದು  ಸೆಟ್ ನಲ್ಲಿ ಕಷ್ಟ ಕೊಟ್ಟರು- ಸ್ಯಾಂಡಲ್ ವುಡ್ ನಟಿ ಅಶಿತಾರಿಂದ...

ಅವರು ಬಯಸಿದಂತೆ ಇರಲಿಲ್ಲ ಎಂದು  ಸೆಟ್ ನಲ್ಲಿ ಕಷ್ಟ ಕೊಟ್ಟರು- ಸ್ಯಾಂಡಲ್ ವುಡ್ ನಟಿ ಅಶಿತಾರಿಂದ ಮೀಟೂ ಆರೋಪ.

ಬೆಂಗಳೂರು,ಸೆಪ್ಟಂಬರ್,16,2022(www.justkannada.in):  ಈವರೆಗೆ ತಣ್ಣಗಾಗಿದ್ಧ ಮೀಟೂ ಪ್ರಕರಣ ಇದೀಗ ಮತ್ತೆ ಸದ್ಧು ಮಾಡುತ್ತಿದ್ದು, ಇದೀಗ ಸ್ಯಾಂಡಲ್ ವುಡ್ ನಟಿ ಅಶಿತಾ ಅವರು ಮೀಟೂ ಬಾಂಬ್ ಸಿಡಿಸಿದ್ದಾರೆ.

ಚಿತ್ರರಂಗದಿಂದ ದೂರವಾಗಿದ್ದಕ್ಕೆ ಸಂದರ್ಶನವೊಂದರಲ್ಲಿ ಕಾರಣ ನೀಡಿರುವ ನಟಿ ಅಶಿಕಾ, ಸಿನಿಮಾ ಕ್ಷೇತ್ರದಲ್ಲಿ ಆರೋಗ್ಯಕರ ವಾತಾವರಣ ಇರಲಿಲ್ಲ. ನಾನು ಅವರು ಹೇಳಿದಂತೆ ಅಡ್ಜೆಸ್ಟ್ ಮೆಂಟ್ ಆಗಲಿಲ್ಲ. ಅವರು ಬಯಸಿದಂತೆ ಇರಲಿಲ್ಲ ಎಂದು ಸೆಟ್ ನಲ್ಲಿ ಕಷ್ಟ ಕೊಟ್ಟರು.

ಎಲ್ಲಾ ಚಿತ್ರರಂಗದಲ್ಲೂ ಮೀಟು ನಡೆಯುತ್ತಿರುತ್ತದೆ. ಮೀಟು ನನ್ನ ಅನುಭವಕ್ಕೆ ಬಂದಿಲ್ಲ ಕೆಲವರು ಹೇಳಿದ್ದಾರೆ. ಅವಕಾಶಕ್ಕಾಗಿ ಹೀಗೆಲ್ಲ ನಡೆಯುತ್ತೆ ಎಂದು. ನಾನು ವೈಯಕ್ತಿಕವಾಗಿ ಯಾರ ಮೇಲೂ ಆರೋಪ ಮಾಡಿಲ್ಲ ಎಂದು ನಟಿ ಅಶಿತಾ ತಿಳಿಸಿದ್ದಾರೆ.

ರೋಡ್ ರೋಮಿಯೋ,  ಹಾರ್ಟ್ ಬೀಟ್, ಬಾ ಬಾರೋ ರಸಿಕ, ಆಕಾಶ್ ಚಿತ್ರದಲ್ಲಿ ನಟಿ ಅಶಿತಾ ನಟನೆ ಮಾಡಿದ್ದಾರೆ.

Key words: – Sandalwood -actress -Ashita -alleges – Metoo.