Sunday, October 11, 2026

Dasara Wishes

BJP DasraWishes_JK DasraWishes JK
Happy Dasara
Home Front Page ಏಷ್ಯಾ ಕಪ್ ಕ್ರಿಕೆಟ್: ಟೀಂ ಇಂಡಿಯಾಗೆ ಹೊಸ ಜೆರ್ಸಿ

ಏಷ್ಯಾ ಕಪ್ ಕ್ರಿಕೆಟ್: ಟೀಂ ಇಂಡಿಯಾಗೆ ಹೊಸ ಜೆರ್ಸಿ

ಬೆಂಗಳೂರು, ಆಗಸ್ಟ್ 25, 2022 (www.justkannada.in): ಏಷ್ಯಾ ಕಪ್ ಗಾಗಿ ರೂಪಿಸಿರುವ ಹೊಸ ಜೆರ್ಸಿಯಲ್ಲಿರುವ ಫೋಟೋವನ್ನು ಜಡೇಜಾ ಹಂಚಿಕೊಂಡಿದ್ದಾರೆ.

ಭಾರತ ಕ್ರಿಕೆಟ್ ತಂಡದ ಆಲ್ರೌಂಡರ್ ರವೀಂದ್ರ ಜಡೇಜಾ ಏಷ್ಯಾಕಪ್‌ಗಾಗಿ ಹೊಸ ಕ್ರಿಕೆಟ್ ಕಿಟ್ ಪಡೆದ ಮೊದಲ ಆಟಗಾರರಾಗಿದ್ದಾರೆ.

ಆಗಸ್ಟ್ 27, 2022 ರಿಂದ ಸೆಪ್ಟೆಂಬರ್ 11, 2022 ರವರೆಗೆ ಯುಎಇಯಲ್ಲಿ ನಡೆಯಲಿರುವ ಮುಂಬರುವ ಏಷ್ಯಾ ಕಪ್‌ಗಾಗಿ ಹೊಸ ಜೆರ್ಸಿಯನ್ನ ಅನಾವರಣಗೊಳಿಸಲಾಗಿದೆ.

ಈ ಬಾರಿಯ ಏಷ್ಯಾಕಪ್‌ನಲ್ಲಿ ಟೀಮ್ ಇಂಡಿಯಾದ ಮೊದಲ ಪಂದ್ಯ ಆಗಸ್ಟ್ 28 ರಂದು ಪಾಕಿಸ್ತಾನದ ವಿರುದ್ಧ ನಡೆಯಲಿದ್ದು, ಎರಡನೇ ಪಂದ್ಯದಲ್ಲಿ ಭಾರತ ತಂಡವು ಆಗಸ್ಟ್ 31 ರಂದು ಹಾಂಕಾಂಗ್ ವಿರುದ್ಧ ಸೆಣಸಲಿದೆ.

ದುಬೈ ತಲುಪಿದ ನಂತರ ಭಾರತ ತಂಡವು ಬುಧವಾರ ತನ್ನ ಅಭ್ಯಾಸವನ್ನು ಪ್ರಾರಂಭಿಸಿತು. ಈ ಅಭ್ಯಾಸದ ಸೆಷನ್ನ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.