Sunday, October 11, 2026

Dasara Wishes

Happy Dasara
Home Front Page ಮೇಯರ್,  ಉಪಮೇಯರ್ ಮೀಸಲು ಪ್ರಕಟ: ನಾಡಹಬ್ಬ ಮೈಸೂರು ದಸರಾಗೆ ಹೊಸ ‌ಮೇಯರ್..!

ಮೇಯರ್,  ಉಪಮೇಯರ್ ಮೀಸಲು ಪ್ರಕಟ: ನಾಡಹಬ್ಬ ಮೈಸೂರು ದಸರಾಗೆ ಹೊಸ ‌ಮೇಯರ್..!

ಮೈಸೂರು,ಆಗಸ್ಟ್,24,2022(www.justkannada.in):   ರಾಜ್ಯದ 10 ನಗರ ಪಾಲಿಕೆಗಳ ಮೇಯರ್,  ಉಪಮೇಯರ್ ಸ್ಥಾನಕ್ಕೆ  ಮೀಸಲು ಪ್ರಕಟಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಮೈಸೂರು ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ, ಉಪಮೇಯರ್ ಹಿಂದುಳಿದ‌ ವರ್ಗಗಳ‌ ಮಹಿಳೆಗೆ ಮೀಸಲಿರಿಸಲಾಗಿದೆ. ಮೀಸಲು ಪ್ರಕಟಿಸಿ ಟಿ.ಮಂಜುನಾಥ್ ಅವರು  ಪ್ರಕಟಣೆ ಹೊರಡಿಸಿದ್ದಾರೆ.ಮೇಯರ್, ಉಪಮೇಯರ್ ಮೀಸಲು ಪ್ರಕಟ: ನಾಡಹಬ್ಬ ಮೈಸೂರು ದಸರಾಗೆ ಹೊಸ ‌ಮೇಯರ್..! mysore mayor

ಕಳೆದ 5 ತಿಂಗಳಿಂದ ಮೀಸಲು ಪ್ರಕಟವಾಗಿರಲಿಲ್ಲ.  ಮೈಸೂರು ಹಾಲಿ ಮೇಯರ್ ಸುನಂದಾ ಪಾಲನೇತ್ರ ಅವಧಿ ಮುಗಿದು 5 ತಿಂಗಳು ಕಳೆದಿತ್ತು. ಹೀಗಾಗಿ ಹಂಗಾಮಿ‌ ಮೇಯರ್ ಆಗಿ ಮುಂದುರಿದಿದ್ದರು. ಜೆಡಿಎಸ್- ಬಿಜೆಪಿ ಮೈತ್ರಿಯಿಂದ‌ ಮೇಯರ್ ಆಗಿದ್ದರು.

ಸುನಂದಾ ಪಾಲನೇತ್ರ, ಮಾಜಿ ಸಿಎಂ‌ ಬಿಎಸ್ ವೈ ಅವರ ದೂರದ ಸಂಬಂಧಿಯಾಗಿದ್ದಾರೆ. ಇದೀಗ  ಮೇಯರ್ ಉಪಮೇಯರ್ ಸ್ಥಾನಕ್ಕೆ ಮೀಸಲು ಪ್ರಕಟವಾಗಿದ್ದು,  ನಾಡಹಬ್ಬ ಮೈಸೂರು ದಸರಾ ವೇಳೆಗೆ ಹೊಸ‌ಮೇಯರ್ ಆಗಮನವಾಗುವ ಸಾಧ್ಯತೆ ಇದೆ.

Key words: Mayor- Deputy -Mayor –reservetion- Mysore