Tuesday, August 4, 2026

BDA Apartments

Home Front Page ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅನುಮತಿ ನೀಡುವಂತೆ ಸಿಎಂಗೆ ಪತ್ರ ಬರೆದ ಶಾಸಕ ಸಿ.ಟಿ ರವಿ.

ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅನುಮತಿ ನೀಡುವಂತೆ ಸಿಎಂಗೆ ಪತ್ರ ಬರೆದ ಶಾಸಕ ಸಿ.ಟಿ ರವಿ.

ಬೆಂಗಳೂರು,ಆಗಸ್ಟ್,24,2022(www.justkannada.in):  ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅವಕಾಶ ನೀಡಬೇಕೆಂದು ಸಿಎಂ ಬಸವರಾಜ ಬೊಮ್ಮಾಯಿಗೆ  ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಪತ್ರ ಬರೆದು ಮನವಿ ಮಾಡಿದ್ದಾರೆ.

ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅವಕಾಶ ನೀಡುವಂತೆ ಚಾಮರಾಜಪೇಟೆ ನಾಗರೀಕ ಒಕ್ಕೂಟ  ಶಾಸಕ ಸಿ.ಟಿ ರವಿ ಅವರಿಗೆ ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿಗೆ  ಸಿ ಟಿ ರವಿ ಪತ್ರ ಬರೆದು ಮನವಿ ಮಾಡಿದ್ದಾರೆ.

ನಮಾಜ್ ಗೆ ಅವಕಾಶ  ಇದೆ. ಆದರೆ ಗಣೇಶೋತ್ಸವಕ್ಕೆ ಯಾಕೆ ನೀಡಲ್ಲ.  ಗಣೇಶೋತ್ಸವ ಆಚರಣೆಗೆ ವಿರೋಧ ಮಾಡೋದು ಸರಿಯಲ್ಲ. ಗಣಪತಿ ಕೂರಿಸಿದ್ರೆ ಇಸ್ಲಾಂ ಕೂಡ ಪವಿತ್ರ ಆಗುತ್ತೆ. ಗಣೇಶೋತ್ಸವ ವಿರೋಧಿಸಿದರೇ ಭಾರತದಲ್ಲಿ ಜಾತ್ಯಾತೀತ ವ್ಯವಸ್ಥೆ ವಿರೋಧಿಸಿದಂತೆ . ಹೀಗಾಗಿ ಈದ್ಗಾ ಮೈದಾನದಲ್ಲಿ   ಗಣೇಶೋತ್ಸವಕ್ಕೆ ಅವಕಾಶ ನೀಡಿ ಎಂದಿದ್ದಾರೆ.

Key words: MLA -CT Ravi- written – CM – give -permission -Ganeshotsavam – Idga Maidan.