ಬೆಂಗಳೂರಿನಲ್ಲಿ ರಸ್ತೆಗುಂಡಿಗೆ ಮತ್ತೊಬ್ಬರು ಬಲಿ.

ಬೆಂಗಳೂರು,ಆಗಸ್ಟ್,24,2022(www.justkannada.in):  ರಾಜ್ಯರಾಜಧಾನಿ ಬೆಂಗಳೂರಿನಲ್ಲಿ ರಸ್ತೆಗುಂಡಿ ಮತ್ತೊಂದು ಬಲಿ ಪಡೆದಿದೆ.

ಬೆಂಗಳೂರಿನ ಹೇರೋಹಳ್ಳಿ ಮುಖ್ಯ ರಸ್ತೆಯಲ್ಲಿ ಗುಂಡಿಯಿಂದಾಗಿ ಸ್ಕಿಡ್ ಆಗಿ ಬಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಸುಪ್ರಿತ್(44) ಮೃತಪಟ್ಟವರು. ಮಗಳನ್ನ ಶಾಲೆಗೆ ಬಿಡಲು ತೆರಳುತ್ತಿದ್ದ ವೇಳೆ ಬೈಕ್ ಸ್ಕಿಡ್ ಆಗಿ ಬಿದ್ದು ಗಾಯಗೊಂಡಿದ್ದರು. ಆಗಸ್ಟ್ 18 ರಂದು ಈ ಘಟನೆ ನಡೆದಿತ್ತು.tractor-collision-bike-bike-rider-dies-on-the-spot-mysore

ಗಾಯಗೊಂಡಿದ್ಧ ಸುಪ್ರೀತ್ ಅವರನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಸುಪ್ರೀತ್ ಮೃತಪಟ್ಟಿದ್ದಾರೆ.

Key words: bangalore-bike-accident-death