Sunday, September 20, 2026

BDA Apartments

ಶಿವಮೊಗ್ಗ ನಗರ ಸಂಪೂರ್ಣ ಶಾಂತಿಯುತ: ಯಾರು ಭಯಪಡುವ ಅಗತ್ಯವಿಲ್ಲ-ಎಡಿಜಿಪಿ ಅಲೋ...
Home Front Page ಶಿವಮೊಗ್ಗ ನಗರ ಸಂಪೂರ್ಣ ಶಾಂತಿಯುತ: ಯಾರು ಭಯಪಡುವ ಅಗತ್ಯವಿಲ್ಲ-ಎಡಿಜಿಪಿ ಅಲೋಕ್ ಕುಮಾರ್.

ಶಿವಮೊಗ್ಗ ನಗರ ಸಂಪೂರ್ಣ ಶಾಂತಿಯುತ: ಯಾರು ಭಯಪಡುವ ಅಗತ್ಯವಿಲ್ಲ-ಎಡಿಜಿಪಿ ಅಲೋಕ್ ಕುಮಾರ್.

ಶಿವಮೊಗ್ಗ,ಆಗಸ್ಟ್,17,2022(www.justkannada.in):  ಶಿವಮೊಗ್ಗ ನಗರ ಸಂಪೂರ್ಣ ಶಾಂತಿಯುತವಾಗಿದ್ದು, ಯಾರು ಭಯಪಡುವ ಅಗತ್ಯವಿಲ್ಲ ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದರು.

ಆಗಸ್ಟ್ 15 ರಂದು ಶಿವಮೊಗ್ಗದಲ್ಲಿ ಗಲಭೆಯುಂಟಾಗಿ ಪೊಲೀಸರಿಂದ ಲಾಠಿಚಾರ್ಜ್ ಆಗಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಈ ಬೆನ್ನಲ್ಲೆ ಪ್ರೇಮ್ ಸಿಂಗ್ ಎನ್ನುವವರಿಗೆ ಕಿಡಿಗೇಡಿಗಳು ಚಾಕುವಿನಿಂದ ಹಲ್ಲೆ ಮಾಡಿದ್ದು ಮತ್ತಷ್ಟು ಪರಿಸ್ಥಿತಿಯನ್ನ ಹದಗೆಡಿಸಿತ್ತು. ನಂತರ ಶಿವಮೊಗ್ಗ ನಗರದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು.

ಈ ಸಂಬಂಧ ಮಾತನಾಡಿರುವ ಎಡಿಜಿಪಿ ಅಲೋಕ್ ಕುಮಾರ್,  ಶಿವಮೊಗ್ಗ ನಗರ ಸಂಪೂರ್ಣ ಶಾಂತಿಯುತವಾಗಿದೆ. ನಗರದಲ್ಲಿ ಇಂದು ಶಾಲಾ ಕಾಲೇಜು ಆರಂಭವಾಗಿವೆ. ಯಾರು ಭಯಪಡುವ ಅಗತ್ಯವಿಲ್ಲ. ಎರಡು ದಿನದಲ್ಲಿ ನಗರ ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ.  ನಿಷೇಧಾಜ್ಞೆ ಮುಂದುವರೆಸಲಾಗಿದೆ ಎಂದಿದ್ದಾರೆ.ಶಿವಮೊಗ್ಗ ನಗರ ಸಂಪೂರ್ಣ ಶಾಂತಿಯುತ alok

ಭದ್ರಾವತಿಯಲ್ಲಿ ಇಂದೂ ಕೂಡ ಅಂಗಡಿಗಳು ಬಂದ್ ಆಗಿವೆ.  ಅಗತ್ಯ ವಸ್ತುಗಳ ಅಂಗಡಿ ಹೊರತುಪಡಿಸಿ ಎಲ್ಲಾ ಬಂದ್ ಆಗಿದ್ದು ಭದ್ರಾವತಿಯಲ್ಲಿ ಹೋಟೆಲ್ ಗಳಲ್ಲಿ ಪಾರ್ಸಲ್ ಗಷ್ಟೆ ಅವಕಾಶವಿದೆ.

Key words: Shimoga- city –completely- peaceful-ADGP- Alok Kumar.