Saturday, August 22, 2026

BDA Apartments

Home Front Page ಮೈಸೂರು: ಮನೆಗೋಡೆ ಕುಸಿದು ತಾಯಿ ಮಗನಿಗೆ ಗಂಭೀರ ಗಾಯ…

ಮೈಸೂರು: ಮನೆಗೋಡೆ ಕುಸಿದು ತಾಯಿ ಮಗನಿಗೆ ಗಂಭೀರ ಗಾಯ…

ಮೈಸೂರು,ಆ,12,2019(www.justkannada.in):  ನಿರಂತರ ಮಳೆಯಿಂದಾಗಿ ಮನೆಗೋಡೆ ಕುಸಿದು ತಾಯಿ ಮತ್ತು ಮಗ ಗಂಭೀರ ಗಾಯಗೊಂಡಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಹುಣಸೂರು ತಾಲ್ಲೂಕಿನ ಕರ್ಣಕುಪ್ಪೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ತಾಯಿ ರಾಧಮ್ಮ ಮತ್ತು ಮಗ ಸೋನು ಗೋಡೆ ಕುಸಿತದಿಂದ ಗಾಯಗೊಂಡವರು. ನಿರಂತರವಾಗಿ ಸುರಿದ ಭಾರಿ ಮಳೆಯಿಂದಾಗಿ ಗೋಡೆ ಕುಸಿದು ಮನೆಯಲ್ಲಿದ್ದ ತಾಯಿ ಮಗ ಇಬ್ಬರು ಗಂಭೀರ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನ ಮೈಸೂರಿನ ಕೆ.ಆರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Key words: Mysore- Mother- son- seriously- injured- after-house- collapses