Sunday, September 20, 2026

BDA Apartments

Home Front Page ರಾಜ್ಯಕ್ಕೆ ಒಳ್ಳೆಯದಾಗಬೇಕಂದ್ರೆ ಸಿದ್ಧರಾಮಯ್ಯ ಸಿಎಂ ಆಗಬೇಕು- ಡಿಕೆಶಿಗೆ ಶಾಸಕ ಜಮೀರ್ ಅಹ್ಮದ್ ಖಾನ್ ಟಾಂಗ್.

ರಾಜ್ಯಕ್ಕೆ ಒಳ್ಳೆಯದಾಗಬೇಕಂದ್ರೆ ಸಿದ್ಧರಾಮಯ್ಯ ಸಿಎಂ ಆಗಬೇಕು- ಡಿಕೆಶಿಗೆ ಶಾಸಕ ಜಮೀರ್ ಅಹ್ಮದ್ ಖಾನ್ ಟಾಂಗ್.

ಬೆಂಗಳೂರು,ಜುಲೈ,21,2022(www.justkannada.in):  ಕಾಂಗ್ರೆಸ್ ನಲ್ಲಿ ಸಿಎಂ ಅಭ್ಯರ್ಥಿ ವಿಚಾರಕ್ಕೆ ಫೈಟ್ ನಡೆಯುತ್ತಿದ್ದು,  ಒಕ್ಕಲಿಗ ಸಮುದಾಯ ನನ್ನ ಬೆಂಬಲಕ್ಕೆ ನಿಲ್ಲಬೇಕು ಎಂದು ಹೇಳಿಕೆ ನೀಡಿದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಟಾಂಗ್ ನೀಡಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿರುವ ಶಾಸಕ ಜಮೀರ್, ಎಲ್ಲರಿಗೂ ಸಿಎಂ ಆಗುವ ಆಸೆ ಇರುತ್ತದೆ. ನನಗೂ ಸಿಎಂ ಆಗುವ ಆಸೆ ಇದೆ. ಒಂದೇ ಸಮುದಾಯದಿಂದ ಯಾರು ಸಿಎಂ ಆಗಲ್ಲ. ಒಕ್ಕಲಿಗ ಸಮುದಾಯದಂತೆ ನಮ್ಮ ಸಮುದಾಯವೂ ದೊಡ್ಡದಿದೆ. ನನಗೂ ಸಿಎಂ ಆಗುವ ಆಸೆ ಇದೆ. ಒಂದೇ ಸಮುದಾಯದಿಂದ ಯಾರು ಸಿಎಂ ಆಗಲ್ಲ. ಎಲ್ಲಾ ಸಮಾಜದವರು ಸೇರಿ ಮತ ಕೊಟ್ರೆ ಸಿಎಂ ಆಗಬಹುದು.  ರಾಜ್ಯಕ್ಕೆ ಒಳ್ಳೆಯದಾಗಬೇಕೆಂದ್ರೆ ಸಿದ್ದರಾಮಯ್ಯ ಸಿಎಂ ಆಗಬೇಕು. ಸಿದ್ಧರಾಮಯ್ಯ ಸಿಎಂ ಆಗಬೇಕು ಅನ್ನೋದು ಜನರ ಆಸೆ. ಸಿದ್ಧರಾಮಯ್ಯ ಸಿಎಂ ಆಗಲಿ ಅನ್ನೋದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಹೇಳಿದ್ದಾರೆ.

ಸೋನಿಯಾಗಾಂಧಿ ಇಡಿ ವಿಚಾರಣೆ ಕುರಿತು ಪ್ರತಿಕ್ರಿಯಿಸಿದ ಶಾಸಕ ಜಮೀರ್, ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ. ಟಾರ್ಗೆಟ್ ಮಾಡಿ ಸೋನಿಯಾಗಾಂಧಿ ವಿಚಾರಣೆ ಮಾಡಲಾಗುತ್ತಿದೆ . ಬಿಜೆಪಿಯವರು ನಮ್ಮನ್ನ ಹೆದರಿಸಲು ವಿಚಾರಣೆ ಮಾಡುತ್ತಿದ್ದಾರೆ. ಮುಚ್ಚೋಗಿದ್ದ ಪ್ರಕರಣವನ್ನ ಮತ್ತೆ ಓಪನ್ ಮಾಡಿದ್ದಾರೆ. 10 ವರ್ಷದ ಹಿಂದೆಯೇ ಕೇಸ್ ಕ್ಲೋಸ್ ಆಗಿತ್ತು ವಿಚಾರಣೆ ಹೆಸರಿನಲ್ಲಿ ಸೋನಿಯಾಗಾಂಧಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.

Key words: Siddaramaiah -become – CM-MLA- Jamir Ahmed Khan