Friday, August 21, 2026

BDA Apartments

Home Cinema ವಿವಾದದ ಸುಳಿಗೆ ಸಿಲುಕಿದ ‘ಪೊಣ್ಣಿಯಿನ್ ಸೆಲ್ವನ್-1′

ವಿವಾದದ ಸುಳಿಗೆ ಸಿಲುಕಿದ ‘ಪೊಣ್ಣಿಯಿನ್ ಸೆಲ್ವನ್-1′

ಬೆಂಗಳೂರು, ಜುಲೈ 19, 2022 (www.justkannada.in): ನಿರ್ದೇಶಕ ಮಣಿರತ್ನಂ ನಿರ್ದೇಶನದ ಮುಂದಿನ ಚಿತ್ರ ‘ಪೊಣ್ಣಿಯಿನ್‌ ಸೆಲ್ವನ್‌-1′ ವಿವಾದದ ಸುಳಿಗೆ ಸಿಲುಕಿದೆ.

ಸಿನಿಮಾ ಬಿಡುಗಡೆಗೂ ಮೊದಲೇ ವಿಶೇಷ ಪ್ರದರ್ಶನವಾಗಬೇಕು. ಇತಿಹಾಸ ಚ್ಯುತಿಯಾಗಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಬೇಕೆಂದು ಕೋರ್ಟ್ ನಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ವಕೀಲರು ಕೋರ್ಟ್ ಮೂಲಕ ಮಣಿರತ್ನಂ ಹಾಗೂ ವಿಕ್ರಮ್‌ಗೆ ನೋಟಿಸ್‌ ಜಾರಿಗೊಳಿಸಿದ್ದಾರೆ.

ಚೋಳರ ಸಾಮ್ರಾಜ್ಯದ ಕಥೆಯನ್ನಾಧರಿಸಿದ ಸಿನಿಮಾದ ಪೋಸ್ಟರ್‌ ತಕರಾರು ಎತ್ತಿದ್ದು, ಚೋಳರು ಹಣೆಗೆ ತಿಲಕವನ್ನು ಹಚ್ಚುತ್ತಿರಲಿಲ್ಲ. ಆದರೆ ಮಣಿರತ್ನಂ ಅವರ ಸಿನಿಮಾದ ಪೋಸ್ಟರ್‌ನಲ್ಲಿ ನಟ ವಿಕ್ರಮ್‌ ತಿಲಕ ಹಚ್ಚಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.