Friday, August 21, 2026

BDA Apartments

Home Front Page ಇದ್ದಕ್ಕಿದಂತೆ ಏಕದಿನ ಕ್ರಿಕೆಟ್’ಗೆ ವಿದಾಯ ಹೇಳಿದ್ದೇಕೆ ಬೆನ್ ಸ್ಟೋಕ್ಸ್

ಇದ್ದಕ್ಕಿದಂತೆ ಏಕದಿನ ಕ್ರಿಕೆಟ್’ಗೆ ವಿದಾಯ ಹೇಳಿದ್ದೇಕೆ ಬೆನ್ ಸ್ಟೋಕ್ಸ್

ಬೆಂಗಳೂರು, ಜುಲೈ 19, 2022 (www.justkannada.in): ತಂಡದ ನಾಯಕರಾಗಿ ಆಯ್ಕೆಯಾಗಿದ್ದ ಬೆನ್ ಸ್ಟೋಕ್ಸ್, ಮಧ್ಯಮ ಕ್ರಮಾಂಕದ ಸ್ಟ್ರಾಂಗ್ ಬ್ಯಾಟ್ಸ್ ಮನ್ ಏಕದಿನ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದಾರೆ.

ಬೆನ್ ಸ್ಟೋಕ್ಸ್ ಇಂಗ್ಲೆಂಡ್ ಪರ 104 ಏಕದಿನ ಪಂದ್ಯಗಳನ್ನು ಆಡಿದ್ದು, ಭಾರತ ವಿರುದ್ಧದ ಏಕದಿನ ಸರಣಿಯ 3 ಪಂದ್ಯಗಳಲ್ಲಿ ಕೇವಲ 48 ರನ್ ಗಳಿಸಿದ್ದು, ಬೌಲಿಂಗ್ ನಲ್ಲಿ ಕೂಡ ಯಾವುದೇ ವಿಕೆಟ್ ಪಡೆದಿರಲಿಲ್ಲ.

2019ರ ವಿಶ್ವಕಪ್ ಗೆದ್ದ ಇಂಗ್ಲೆಂಡ್ ತಂಡದ ಹೀರೊ ಆಗಿದ್ದ ಬೆನ್ ಸ್ಟೋಕ್ಸ್ ಮಾನಸಿಕ ಒತ್ತಡದ ಹಿನ್ನೆಲೆಯಲ್ಲಿ ಎರಡು ವರ್ಷಗಳ ಕಾಲ ವಿಶ್ರಾಂತಿ ಪಡೆದಿದ್ದರು.

ಇದೀಗ ಶೇ.100ರಷ್ಟು ತಂಡಕ್ಕೆ ಕೊಡಲು ನನ್ನಿಂದ ಸಾಧ್ಯವಿಲ್ಲ ಎಂದು ಅವರು ವಿದಾಯಕ್ಕೆ ಕಾರಣ ಹೇಳಿಕೊಂಡಿದ್ದಾರೆ.