Sunday, August 23, 2026

BDA Apartments

Home Front Page ಚೀನಾದಲ್ಲಿ ಇಂದು ಬೆಳ್ಳಂಬೆಳಗ್ಗೆ ಭೂಕಂಪ

ಚೀನಾದಲ್ಲಿ ಇಂದು ಬೆಳ್ಳಂಬೆಳಗ್ಗೆ ಭೂಕಂಪ

ಬೆಂಗಳೂರು, ಜುಲೈ 03, 2022 (www.justkannada.in): ಚೀನಾದ ಕ್ಸಿನ್‌ಜಿಯಾಂಗ್ ಉಯ್ಗುರ್ ಸ್ವಾಯತ್ತ ಪ್ರದೇಶದಲ್ಲಿ ಇಂದು ಬೆಳಗ್ಗೆ 5.2 ತೀವ್ರತೆಯ ಭೂಕಂಪ ಸಂಭವಿಸಿದೆ.

ವಾಯುವ್ಯ ಚೀನಾದ ಅಕ್ಕಿ ಕೌಂಟಿಯಲ್ಲಿ ಇಂದು ಬೆಳಗ್ಗೆ 6:02 ಗಂಟೆಗೆ (ಬೀಜಿಂಗ್ ಸಮಯ) ಭೂಕಂಪನದ ಅನುಭವ ಉಂಟಾಗಿದೆ.

ಚೀನಾ ಭೂಕಂಪ ನೆಟ್‌ವರ್ಕ್ಸ್ ಸೆಂಟರ್ (ಸಿಇಎನ್‌ಸಿ) ಈ ಮಾಹಿತಿ ಪ್ರಕಟಿಸಿದೆ. ಶನಿವಾರ ಮುಂಜಾನೆ 3:29 ಕ್ಕೆ ಚೀನಾದ ಕ್ಸಿನ್‌ಜಿಯಾಂಗ್ ಪ್ರದೇಶದಲ್ಲಿ ರಿಕ್ಟರ್ ಮಾಪಕದಲ್ಲಿ 4.3 ತೀವ್ರತೆಯ ಭೂಕಂಪನ ಸಂಭವಿಸಿತ್ತು.

ಭೂಕಂಪದ ಕೇಂದ್ರವು 40.88 ಡಿಗ್ರಿ ಉತ್ತರ ಅಕ್ಷಾಂಶ ಮತ್ತು 78.14 ಡಿಗ್ರಿ ಪೂರ್ವ ರೇಖಾಂಶದಲ್ಲಿ ಕಂಡುಬಂದಿದೆ ಹಾಗೂ 10 ಕಿಮೀ ಆಳದಲ್ಲಿ ಭೂಮಿ ಕಂಪಿಸಿದೆ ಚೀನಾ ಭೂಕಂಪ ನೆಟ್‌ವರ್ಕ್ಸ್ ಸೆಂಟರ್ ತಿಳಿಸಿದೆ.