ಕೆಯುಡಬ್ಲ್ಯೂಜೆ ಕಚೇರಿಯಲ್ಲಿ ಪತ್ರಿಕಾ ದಿನಾಚರಣೆ, ಪತ್ರಿಕೆ ವಿತರಕರಿಗೆ ಸನ್ಮಾನ

ಬೆಂಗಳೂರು,ಜುಲೈ,2,2022(www.justkannada.in):  ನಾಡಿನ ಪತ್ರಕರ್ತರೆಲ್ಲರೂ ಇದೀಗ ಸವಾಲಿನ ಪರಿಸ್ಥಿತಿಯಲ್ಲಿದ್ದು, ವೃತ್ತಿ ಬದ್ಧತೆ ಪ್ರತಿಯೊಬ್ಬ ಪತ್ರಕರ್ತರ ಆದ್ಯ ಕರ್ತವ್ಯವಾಗಬೇಕೆಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಹೇಳಿದರು.

ಅವರು ಸಂಘದ ಸಭಾಂಗಣದಲ್ಲಿ ಶುಕ್ರವಾರ ನಡೆದ ಪತ್ರಿಕಾ ದಿನಾಚರಣೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಜ್ಯ ಪತ್ರಕರ್ತರ ಸಂಘವು ಹಲವು ವೈರುಧ್ಯಗಳನ್ನು ಎದುರಿಸುತ್ತಾ ಬಂದರೂ, ಸದಾ ಕಾಲ ಸದಸ್ಯರ ಬೆಂಗಾವಲಾಗಿ ನಿಂತಿದ್ದು, ಪತ್ರಕರ್ತರ ಧ್ವನಿಯಾಗಿದೆ ಎಂದು ಅವರು  ಹೇಳಿದರು.

IFWJ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ ಮಾತನಾಡಿ, ಪತ್ರಕರ್ತರಿಗೆ ನೆರವು ಕೊಡಿಸಲು, ಸಂಷ್ಟದ ಸಂದರ್ಭದಲ್ಲಿ ಬೆಂಬಲವಾಗಿ ನಿಲ್ಲುವ ಕೆಲಸವನ್ನು ಕೆಯುಡಬ್ಲ್ಯೂಜೆ ಮಾಡಿದೆ. ಶಿವಾನಂದ್ ಸಾರಥ್ಯದಲ್ಲಿ ಸಂಘ ಅತ್ಯುತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದರು. ಈ ಸಂದರ್ಭದಲ್ಲಿ ಸಂಘದ ಮಾಜಿ ರಾಜ್ಯಾಧ್ಯಕ್ಷರಾದ ವಿ. ವೆಂಕಟೇಶ್ ಅವರನ್ನು ಸನ್ಮಾನಿಸಲಾಯಿತು.

ವಿತರಕರಿಗೆ ಗೌರವ:
ಮೆಜೆಸ್ಟಿಕ್ ಭಾಗದಲ್ಲಿ 30 ವರ್ಷಗಳಿಂದ ಪತ್ರಿಕಾ ವಿತರಕರಾಗಿ ಸೇವೆ ಸಲ್ಲಿಸುತ್ತಿರುವ ಬಿ.ಆರ್.ವಿ.ರಮೇಶ್ ಮತ್ತು  ನಾಗರತ್ನ ಅವರನ್ನೂ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ, ಉಪಾಧ್ಯಕ್ಷ ಭವಾನಿ ಸಿಂಗ್, ಮಾಧ್ಯಮ ಅಕಾಡೆಮಿ ಸದಸ್ಯ ದೇವೇಂದ್ರಪ್ಪ ಕಪನ್ನೂರ, ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಕೆ.ಸತ್ಯನಾರಾಯಣ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಸೋಮಶೇಖರ ಗಾಂಧಿ ಮತ್ತಿತರರು ಭಾಗವಹಿಸಿದ್ದರು.

key words: Press Day -Celebration -KUWJ- Office