Friday, September 18, 2026

BDA Apartments

Home Front Page ಹೆಚ್.ಡಿ ದೇವೇಗೌಡರ ಆರೋಗ್ಯದ ಬಗ್ಗೆ ವೈಯಕ್ತಿಕ ಟೀಕೆ ಸರಿಯಲ್ಲ: ಕ್ಷಮೆ ಕೇಳುವಂತೆ ಕೆ.ಎನ್ ರಾಜಣ್ಣಗೆ ಹೆಚ್.ವಿಶ್ವನಾಥ್...

ಹೆಚ್.ಡಿ ದೇವೇಗೌಡರ ಆರೋಗ್ಯದ ಬಗ್ಗೆ ವೈಯಕ್ತಿಕ ಟೀಕೆ ಸರಿಯಲ್ಲ: ಕ್ಷಮೆ ಕೇಳುವಂತೆ ಕೆ.ಎನ್ ರಾಜಣ್ಣಗೆ ಹೆಚ್.ವಿಶ್ವನಾಥ್ ಆಗ್ರಹ.

ಮೈಸೂರು,ಜುಲೈ,2,2022(www.justkannada.in):  ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಬಗ್ಗೆ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವಹೇಳನ ಹೇಳಿಕೆ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮೈಸೂರಿನಲ್ಲಿ ಎಂಎಲ್ಸಿ ಹೆಚ್.ವಿಶ್ವನಾಥ್, ಹೆಚ್.ಡಿ.ದೇವೇಗೌಡರ ಬಗ್ಗೆ ಅವಹೇಳನ ಮಾಡೋದು ಸರಿಯಲ್ಲ. ಹೆಚ್.ಡಿ ದೇವೇಗೌಡರು ದೇಶದ ಪ್ರಧಾನಿಯಾಗಿ ಕರ್ನಾಟಕದ ಗೌರವ ಹೆಚ್ಚಿಸಿದವರು. ರಾಜಕೀಯವಾಗಿ ಏನು ಬೇಕಾದ್ರೂ ಚರ್ಚೆ ಮಾಡಿ. ಆದರೆ ಅವರ ಆರೋಗ್ಯದ ಬಗ್ಗೆ ವೈಯಕ್ತಿಕ ಟೀಕೆ ಸರಿಯಲ್ಲ. ಈಗಾಗಲೇ ರಾಜಣ್ಣ ಕ್ಷಮೆ ಕೇಳಿದ್ದಾರೆ. ಆದರೆ ಅವರನ್ನ ವೈಯಕ್ತಿಕವಾಗಿ ಭೇಟಿಯಾಗಿ ಕ್ಷಮೆಯಾಚಿಸಬೇಕು ಎಂದು ತಿಳಿಸಿದರು.

ನಿನ್ನೆ ಸಭೆಯೊಂದರಲ್ಲಿ ಮಾತನಾಡಿದ್ಧ ಕೆ.ಎನ್ ರಾಜಣ್ಣ, ‘ದೇವೇಗೌಡರು ಇಬ್ಬರ ಮೇಲೆ ಕೈ ಹಾಕ್ಕೊಂಡು ಹೋಗ್ತಾವ್ರೇ… ನಾಲ್ವರು ಹೊತ್ಕೊಂಡ್ ಹೋಗೋದು ಹತ್ತಿರದಲ್ಲೇ ಇದೆ ಎಂದು ಹೇಳಿಕೆ ನೀಡಿದ್ದರು.

Key words: Personal- criticism -HD Devegowda- MLC- H. Vishwanath -K. N. Rajanna