Thursday, August 6, 2026

BDA Apartments

Home Front Page ಬಸ್ ಪಾಸ್ ಅವಧಿ ವಿಸ್ತರಣೆಗೆ ಆಗ್ರಹ: ಮೈಸೂರಿನಲ್ಲಿ ವಿದ್ಯಾರ್ಥಿಗಳಿಂದ ಪ್ರತಿಭಟನೆ.

ಬಸ್ ಪಾಸ್ ಅವಧಿ ವಿಸ್ತರಣೆಗೆ ಆಗ್ರಹ: ಮೈಸೂರಿನಲ್ಲಿ ವಿದ್ಯಾರ್ಥಿಗಳಿಂದ ಪ್ರತಿಭಟನೆ.

ಮೈಸೂರು,ಜುಲೈ,1,2022(www.justkannada.in): ಬಸ್ ಪಾಸ್ ಅವಧಿ ವಿಸ್ತರಿಸುವಂತೆ ಆಗ್ರಹಿಸಿ ಮೈಸೂರಿನಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿದ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಬಸ್ ಪಾಸ್ ವಿಚಾರದಲ್ಲಿ ಕೆಎಸ್ಆರ್ ಟಿಸಿ ಅವೈಜ್ಞಾನಿಕ ನಿರ್ಣಯ ಕೈಗೊಂಡಿದೆ ಎಂದು ಕಿಡಿಕಾರಿದರು. ಕಳೆದ ಸೆಪ್ಟೆಂಬರ್ ನಲ್ಲಿ ಬಸ್ ಪಾಸ್ ವಿತರಣೆ ಮಾಡಲಾಗಿದೆ. ತರಗತಿಗಳು ನವೆಂಬರ್ ನಲ್ಲಿ ಪ್ರಾರಂಭವಾಗಿದೆ. ಆದರೇ ಸಾರಿಗೆ ಇಲಾಖೆ ಜೂನ್ ತಿಂಗಳಿಗೆ ಪಾಸ್ ಅಂತ್ಯ ಎಂದು ಹೇಳಿದೆ. ಇದರಿಂದ ವಿದ್ಯಾರ್ಥಿಗಳು ಹಣ ಪಾವತಿ ಮಾಡಿ ಸಂಚಾರ ಮಾಡಬೇಕಿದೆ.

ಪಾಸ್ ವಿಸ್ತರಣೆ ಮಾಡಲು ಸರ್ಕಾರ ಹಿಂದೇಟು ಹಾಕುತ್ತಿದೆ. ಕೂಡಲೆ ಕೆಎಸ್ ಆರ್ ಟಿಸಿ ತಮ್ಮ ನಿರ್ಧಾರ ಕೈ ಬಿಡಬೇಕು. ಸೆಮಿಸ್ಟರ್ ಮುಗಿಯುವವರೆಗೂ ಪಾಸ್ ಅವಧಿ ವಿಸ್ತರಣೆ ಮಾಡುವಂತೆ ಆಗ್ರಹಿಸಿದರು.

Key words: extension -bus -pass -Protest -students – Mysore.