Wednesday, September 16, 2026

BDA Apartments

Home Front Page ಕೇಂದ್ರದ ಯೋಜನೆಯ ಫಲಾನುಭವಿಗಳೊಂದಿಗೆ ಪ್ರಧಾನಿ ಮೋದಿ ಸಂವಾದ: ಯೋಜನೆಗಳ ಉಪಯೋಗಗಳ ಬಗ್ಗೆ ವಿವರಣೆ.

ಕೇಂದ್ರದ ಯೋಜನೆಯ ಫಲಾನುಭವಿಗಳೊಂದಿಗೆ ಪ್ರಧಾನಿ ಮೋದಿ ಸಂವಾದ: ಯೋಜನೆಗಳ ಉಪಯೋಗಗಳ ಬಗ್ಗೆ ವಿವರಣೆ.

ಮೈಸೂರು,ಜೂನ್,20,2022(www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ  ಕೇಂದ್ರದ ಯೋಜನೆಗಳ ಫಲಾನುಭವಿಗಳ ಜತೆ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಿದರು.

ಬೆಂಗಳೂರಿನಿಂದ ಮೈಸೂರು ವಿವಿ ಓವೆಲ್ ಮೈದಾನದ ಹೆಲಿಪ್ಯಾಡ್ ಗೆ ಆಗಮಿಸಿ ನಂತರ ಮಹರಾಜ ಕಾಲೇಜು ಮೈದಾನದಲ್ಲಿ ಏರ್ಪಡಿಸಲಾಗಿದ್ಧ ಕೇಂದ್ರದ ಯೋಜನೆಗಳ 15 ಫಲಾನುಭವಿಗಳ ಜತೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಚರ್ಚಿಸಿದರು.  ಹಾಸನ,ಮಂಡ್ಯ,ಮೈಸೂರು, ಚಾಮರಾಜನಗರದಿಂದ ಬಂದಿರುವ ಫಲಾನುಭವಿಗಳು ಪ್ರಧಾನಿ  ಮೋದಿ ಅವರ ಜತೆ ಚರ್ಚಿಸಿ ಕೇಂದ್ರ ಯೋಜನೆಯ ಉಪಯೋಗದ ಬಗ್ಗೆ ವಿವರಣೆ ನೀಡಿದರು.ಕೇಂದ್ರದ ಯೋಜನೆಯ ಫಲಾನುಭವಿಗಳೊಂದಿಗೆ ಪ್ರಧಾನಿ ಮೋದಿ ಸಂವಾದ pm modi discussion

ಕೇಂದ್ರದ ನರೇಗಾ, ಉಜ್ವಲ,ರೈತ ಕಿಸಾನ್ ಯೋಜನೆ ಸೇರಿ ಹಲವು ಯೋಜನೆಗಳ ಉಪಯೋಗದ ಬಗ್ಗೆ ಫಲಾನುಭವಿಗಳಿಂದ ಪ್ರಧಾನಿ ಮೋದಿ ಅಭಿಪ್ರಾಯ ಪಡೆದರು. ಯೋಜನೆಗಳಿಂದ ಆರ್ಥಿಕವಾಗಿ ಉಪಯೋಗವಾಗುತ್ತಿರುವ ಕುರಿತು ಫಲಾನುಭವಿಗಳು ವಿವರಿಸಿದರು ಎನ್ನಲಾಗಿದೆ.

ಈ ವೇಳೆ ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಉಪಸ್ಥಿತರಿದ್ದರು.

Key words: Prime Minister –Modi- interacts – beneficiaries – Center project-mysore