ಮೈಸೂರಿಗೆ ಆಗಮಿಸಿದ ಪ್ರಧಾನಿ ಮೋದಿಗೆ ಸಚಿವರು ಸಂಸದರಿಂದ ಸ್ವಾಗತ.

ಮೈಸೂರು,ಜೂನ್,20,2022(www.justkannada.in): ಅಂತರಾಷ್ಟ್ರೀಯ ಯೋಗದಿನ ಸೇರಿ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಸಾಂಸ್ಕೃತಿಕ ನಗರಿ ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದರು.

ಮೈಸೂರು ವಿವಿ ಓವೆಲ್ ಮೈದಾನದ ಹೆಲಿಪ್ಯಾಡ್ ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಬಸವರಾಜ  ಬೊಮ್ಮಾಯಿ ರಾಜ್ಯಪಾಲ ಥಾವರ್ ಚಂದ್  ಗೆಹ್ಲೋಟ್ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಗಮಿಸಿದರು.

ಪ್ರಧಾನಿ ನರೇಂದ್ರ ಮೋದಿಗೆ ಸಚಿವರಾದ ಗೋಪಾಲಯ್ಯ,ಡಾಕೆ. ಸುಧಾಕರ್, ಸಂಸದ ಪ್ರತಾಪ್ ಸಿಂಹ, ಶಾಸಕ ಜಟಿ ದೇವೇಗೌಡ ಮೇಯರ್ ಸುನಂದಾ ಪಾಲನೇತ್ರ ಸ್ವಾಗತ ಕೋರಿದರು.  ಹೆಲಿಪ್ಯಾಡ್ ನಿಂದ ಮಹಾರಾಜ ಕಾಲೇಜು ಮೈದಾನಕ್ಕೆ  ಪ್ರಧಾನಿ ಮೋದಿ ತೆರಳಿದ್ದು ಅಲ್ಲಿ ಕೇಂದ್ರ ಯೋಜನೆಗಳ ಫಲಾನುಭವಿಗಳ ಜತೆ ಸಂವಾದ ನಡೆಸಲಿದ್ದಾರೆ.

Key words: Welcome – PM Modi- arrival -Mysore.