Tuesday, September 15, 2026

BDA Apartments

Home Crime ಸೇಂಟ್ ಮಾರ್ಥಾಸ್ ಆಸ್ಪತ್ರೆ ಬಳಿ ನಿರ್ಮಾಣ ಹಂತ ಕಟ್ಟಡದ ಮೇಲ್ಚಾವಣಿ ಕುಸಿತ: ನಾಲ್ವರ ರಕ್ಷಣೆ.

ಸೇಂಟ್ ಮಾರ್ಥಾಸ್ ಆಸ್ಪತ್ರೆ ಬಳಿ ನಿರ್ಮಾಣ ಹಂತ ಕಟ್ಟಡದ ಮೇಲ್ಚಾವಣಿ ಕುಸಿತ: ನಾಲ್ವರ ರಕ್ಷಣೆ.

ಬೆಂಗಳೂರು,ಮೇ,31,2022(www.justkannada.in): ಸೇಂಟ್ ಮಾರ್ಥಾಸ್ ಆಸ್ಪತ್ರೆ ಬಳಿ ನಿರ್ಮಾಣ ಹಂತ ಕಟ್ಟಡದ ಮೇಲ್ಚಾವಣಿ ಕುಸಿದು ಕಾರ್ಮಿಕರು  ಗಾಯಗೊಂಡಿರುವ ಘಟನೆ ನಡೆದಿದೆ.

ಮೊಯಿದ್ದೀನ್, ಚಾಂದ್ ಪಾಷಾ, ರಫೀಸಾಬ್, ಬಸವರಾಜು ನಾಲ್ವರು ಕಾರ್ಮಿಕರನ್ನ ರಕ್ಷಣೆ ಮಾಡಲಾಗಿದೆ. ಮೇಲ್ಚಾವಣಿ ಕುಸಿಯುವ ಶಬ್ದ ಕೇಳಿ ಬರುತ್ತಿದ್ದಂತೆ ಮೂವರು ಕಾರ್ಮಿಕರು ಹೊರಗೆ ಓಡಿ ಬಂದಿದ್ದಾರೆ. ಘಟನೆಯಲ್ಲಿ ಇಬ್ಬರು ಕಾರ್ಮಿಕರಿಗೆ ಗಾಯವಾಗಿದ್ದು, ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.ಸೇಂಟ್ ಮಾರ್ಥಾಸ್ ಆಸ್ಪತ್ರೆ ಬಳಿ ನಿರ್ಮಾಣ ಹಂತ ಕಟ್ಟಡದ ಮೇಲ್ಚಾವಣಿ ಕುಸಿತ st mar...

ಕಾರ್ಮಿಕರ ರಕ್ಷಣೆಗಾಗಿ ಅಗ್ನಿಶಾಮಕ ದಳ, ಪೊಲೀಸರು ಕಾರ್ಯಚರಣೆ ಮುಂದುವರಿಸಿದ್ದಾರೆ. ಸ್ಥಳಕ್ಕೆ ಬೆಂಗಳೂರು ಕೇಂದ್ರ ವಿಭಾಗದ ಪ್ರಭಾರ ಡಿಸಿಪಿ ಡಿಸಿಪಿ ಶರಣಪ್ಪ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

Key words: Roof collapse – construction — St. Martha’s Hospital- Protection