ಶೈಕ್ಷಣಿಕ ಕಾರ್ಯ ಸ್ಥಳ ಸ್ಥಾಪನೆ: ಎರಡು ಕಂಪನಿ ಜತೆ University of Mysore ಒಡಂಬಡಿಕೆ.

UOM-Univesity-of-mysore- launches its Academic Co-work space.

 

ಮೈಸೂರು, ಮೇ30, 2022 :(www.justkannada.in news ) ಇದೇ ಮೊದಲ ಬಾರಿಗೆ ಮೈಸೂರು ವಿಶ್ವವಿದ್ಯಾನಿಲಯದ ಶೈಕ್ಷಣಿಕ ಸಹ-ಕಾರ್ಯ ಸ್ಥಳವನ್ನು ಸ್ಥಾಪಿಸಲು ಎರಡು ಕಂಪನಿಗಳ ಜತೆ ಔಪಚಾರಿಕ ಒಪ್ಪಂದಕ್ಕೆ ಮುಂದಾಗಿದೆ.

ಈ ನಿಟ್ಟಿನಲ್ಲಿ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಒಪ್ಪಂದಕ್ಕೆ ಸೋಮವಾರ ಸಹಿ ಹಾಕಿದರು.

ಮೊದಲ ಕಂಪನಿ ಧೃತಿ ಬಯೋ ಸೊಲ್ಯೂಷನ್ಸ್‌. ಇದು 4 ಅಂತರಾಷ್ಟ್ರೀಯ ಪೇಟೆಂಟ್‌ಗಳು ಮತ್ತು 5 ಅತ್ಯುತ್ತಮ ನಾವೀನ್ಯತೆ ಪ್ರಶಸ್ತಿಗಳೊಂದಿಗೆ ಆಳವಾದ ತಂತ್ರಜ್ಞಾನವನ್ನು ಒಳಗೊಂಡಿದೆ. ಕಾರ್ಬನ್ ನ್ಯೂಟ್ರಲ್ ಅನ್ನು ರಚಿಸಲು ಕೆಲಸ ಮಾಡುತ್ತಿದೆ. ಮತ್ತೊಂದು ಕಂಪನಿ ಹೆಸರು ಮ್ಯಾಗ್ನಿಮಸ್ ಇನ್ಫೋಟೆಕ್ ಪ್ರೈವೇಟ್ ಲಿಮಿಟೆಡ್. ಇದು ಪೌಷ್ಟಿಕಾಂಶದ ಸುರಕ್ಷಿತ ಬಗ್ಗೆ ಕೆಲಸ ಮಾಡುವ ಕಂಪನಿ. ಅಂತಾರಾಷ್ಟ್ರೀಯ ನಿಧಿಗಳೊಂದಿಗೆ ಒಪ್ಪಂದ ಆಗಿದೆ.

ಈ ವೇಳೆ ಮಾತನಾಡಿದ ಪ್ರೊ.ಜಿ.ಹೇಮಂತ್ ಕುಮಾರ್, ವಿಶ್ವವಿದ್ಯಾನಿಲಯವು ಇದೀಗ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಅಧ್ಯಾಪಕರನ್ನು ಒಂದು ವೇದಿಕೆಯಲ್ಲಿ ತರಲು ಸಹಕಾರಿಯಾಗುತ್ತದೆ. ನೆಟ್ ವರ್ಕಿಂಗ್, ಕಲಿಕೆ, ನಾವೀನ್ಯತೆಯನ್ನು ಇದು ಉತ್ತೇಜಿಸುತ್ತದೆ ಎಂದರು.

ಇದರಿಂದ ಶೈಕ್ಷಣಿಕ ವಾತಾವರಣ ಹೇಗೆ ರೂಪಾಂತರಗೊಳ್ಳುತ್ತದೆ. ಶೈಕ್ಷಣಿಕ ಸಹ-ಕೆಲಸದ ಸ್ಥಳವನ್ನು ಸ್ಥಾಪಿಸುವುದರಿಂದ ಸ್ಟಾರ್ಟ್ ಅಪ್ ಪರಿಸರ ವ್ಯವಸ್ಥೆಯಲ್ಲಿ ಬಲಪಡಿಸುವಲ್ಲಿ ಈ ಉಪಕ್ರಮವು ಬಹಳ ಪ್ರಯೋಜನಕಾರಿಯಾಗಿದೆ ಎಂದರು.

KEY WORDS : UOM-Univesity-of-mysore- launches its Academic Co-work space.

 

ENGLISH SUMMARY :

UOM launches its Academic Co-work space.

University of Mysore in a first of its kind move signed a formal MOU with two companies to establish academic co-work space – Dhriti Bio Solutions a deep technology start-up with 4 international patents and 5 best innovation awards and working towards creating a carbon neutral, sustainable and nutritionally secured world and Magnimous Infotech Pvt Ltd – a biosensor company with state, centre and international funding University believes that this space will bring together students, researchers & and faculty on a platform to foster networking, learning, interaction with an end goal of innovationVice chancellor Prof G Hemanthkumar on this occasion spoke about how academic environment are transforming, he believes that setting up an academic co-work space will complement University’s ongoing initiatives in the startup ecosystem and facilitate informal learning & collaboration. He believes that this initiative will go a long way in strengthening the University’s position as an innovation hub.