Wednesday, September 30, 2026

BDA Apartments

ಯೂಟ್ಯೂಬ್ ನಲ್ಲಿ ಕಿಚ್ಚು ಹಚ್ಚಿದ ವಿಕ್ರಾಂತ್ ರೋಣನ ‘ರಾ ರಾ ರಕ್ಕಮ್ಮ’ BDA JK_Adv BDA Adv
Home Cinema ಯೂಟ್ಯೂಬ್ ನಲ್ಲಿ ಕಿಚ್ಚು ಹಚ್ಚಿದ ವಿಕ್ರಾಂತ್ ರೋಣನ ‘ರಾ ರಾ ರಕ್ಕಮ್ಮ’

ಯೂಟ್ಯೂಬ್ ನಲ್ಲಿ ಕಿಚ್ಚು ಹಚ್ಚಿದ ವಿಕ್ರಾಂತ್ ರೋಣನ ‘ರಾ ರಾ ರಕ್ಕಮ್ಮ’

ಬೆಂಗಳೂರು, ಮೇ 25, 2022 (www.justkannada.in): ಕಿಚ್ಚ ಸುದೀಪ್ ನಟಿಸಿರುವ ಬಹುನಿರೀಕ್ಷಿತ ಸಿನಿಮಾ ವಿಕ್ರಾಂತ್ ರೋಣ ಚಿತ್ರತಂಡ ಮೊನ್ನೆಯಷ್ಟೇ ರಿಲೀಸ್ ಮಾಡಿದ ಲಿರಿಕಲ್ ಹಾಡು ಗಡಂಗ್ ರಕ್ಕಮ್ಮ ಯೂಟ್ಯೂಬ್ ನಲ್ಲಿ ಪಡ್ಡೆ ಹುಡುಗರ ಹೃದಯ ಕದ್ದಿದೆ!

ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫರ್ನಾಂಡಿಸ್ ಹಾಡಿನಲ್ಲಿ ಹೆಜ್ಜೆ ಹಾಕಿದ್ದು, ಯುವಕರ ಎದೆಗೆ ಬೆಂಕಿ ಹಚ್ಚಿದ್ದಾರೆ! ಮಾಸ್ ಸಾಂಗ್ ಗೆ ಕಿಚ್ಚ ಹಾಗೂ ಜಾಕ್ವೆಲಿನ್ ಅಭಿಮಾನಿಗಳು ಫಿದಾ ಆಗಿದ್ದಾರೆ.

ಹಾಡಿಗೆ ಅನೂಪ್ ಭಂಡಾರಿ ಸಾಹಿತ್ಯವಿದ್ದು ಬಿ ಅಜನೀಶ್ ಲೋಕನಾಥ್ ಅವರ ಹೈವೋಲ್ಟೇಜ್ ಸಂಗೀತ ಜೋಶ್ ನೀಡಿದೆ. ಸುನಿಧಿ ಚೌಹಾಣ್ ಮತ್ತು ನಕಾಶ್ ಅಜೀಜ್ ದನಿ ಕಿಕ್ಕೇರಿಸುತ್ತಿದೆ.

ಲಿರಿಕಲ್ ಹಾಡು ಕನ್ನಡಮ ಹಿಂದಿ, ತೆಲುಗು, ತಮಿಳು, ಮಲಯಾಳಂನಲ್ಲಿ ರಿಲೀಸ್ ಆಗಿತ್ತು.