Wednesday, September 30, 2026

BDA Apartments

ಬಾಲಯ್ಯನ ಚಿತ್ರದಲ್ಲಿ ಕನ್ನಡದ ಚೆಲುವೆ ಶ್ರೀಲೀಲಾ BDA JK_Adv BDA Adv
Home Cinema ಬಾಲಯ್ಯನ ಚಿತ್ರದಲ್ಲಿ ಕನ್ನಡದ ಚೆಲುವೆ ಶ್ರೀಲೀಲಾ

ಬಾಲಯ್ಯನ ಚಿತ್ರದಲ್ಲಿ ಕನ್ನಡದ ಚೆಲುವೆ ಶ್ರೀಲೀಲಾ

ಬೆಂಗಳೂರು, ಮೇ 25, 2022 (www.justkannada.in): ನಂದಮೂರಿ ಬಾಲಕೃಷ್ಣ ಅವರ ಹೊಸ ಸಿನಿಮಾದಲ್ಲಿ ನಟಿ ಶ್ರೀಲೀಲಾ ಅಭಿನಯಿಸಲಿದ್ದಾರೆ.

ಹೌದು. ಕನ್ನಡದ ಚೆಲುವೆ ಶ್ರೀಲೀಲಾ ತೆಲುಗಿನ ಸೂಪರ್ ಸ್ಟಾರ್ ಬಾಲಯ್ಯ ಚಿತ್ರದಲ್ಲಿ ನಟಿಸುವ ಚಾನ್ಸ್ ಗಿಟ್ಟಿಸಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

ಕನ್ನಡದಲ್ಲಿ ‘ಕಿಸ್​’ ಮತ್ತು ‘ಭರಾಟೆ’ ಚಿತ್ರದಲ್ಲಿ ನಟಿಸಿ ಗಮನ ಸೆಳೆದಿದ್ದ ಶ್ರೀಲೀಲಾ ಬಾಲಯ್ಯ ಚಿತ್ರದಲ್ಲಿಅವರ ಮಗಳಾಗಿ ನಟಿಸುವ ಅವಕಾಶ ಪಡೆದಿದ್ದಾರೆ.

ಟಾಲಿವುಡ್​ನಲ್ಲಿ ಶ್ರೀಲೀಲಾಗೆ ಬ್ಯಾಕ್​ ಟು ಬ್ಯಾಕ್​ ಅವಕಾಶಗಳು ಹರಿದುಬರುತ್ತಿವೆ. ಈ ಸಿನಿಮಾವನ್ನು ‘ಎಫ್‌2’, ‘ಸರಿಲೇರು ನೀಕೆವ್ವರು’, ‘ಎಫ್‌3′ ಖ್ಯಾತಿಯ ಅನಿಲ್ ರವಿಪುಡಿ ನಿರ್ದೇಶನ ಮಾಡುತ್ತಿದ್ದಾರೆ.

ಜಾತಿ ರತ್ನಲು’ ಖ್ಯಾತಿಯ ನವೀನ್‌ ಪೊಲಿಸೆಟ್ಟಿ ಜೊತೆಗೆ ಹೊಸ ಸಿನಿಮಾದಲ್ಲಿ ಶ್ರೀಲೀಲಾ ನಟಿಸಲಿದ್ದಾರೆ. ‘ಉಪ್ಪೆನ’ ಸಿನಿಮಾದಿಂದ ಫೇಮಸ್ ಆಗಿರುವ ನಟ ವೈಷ್ಣವ್ ತೇಜ್‌ ಅವರ ಹೊಸ ಸಿನಿಮಾದಲ್ಲಿ ಶ್ರೀಲೀಲಾ ಕಾಣಿಸಿಕೊಳ್ಳಲಿದ್ದಾರೆ.