Sunday, August 9, 2026

BDA Apartments

Home Front Page ಮೊದಲು ಮುತಾಲಿಕ್ ನಂತವರನ್ನ ಒದ್ದು ಒಳಗೆ ಹಾಕಿ- ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕಿಡಿ.

ಮೊದಲು ಮುತಾಲಿಕ್ ನಂತವರನ್ನ ಒದ್ದು ಒಳಗೆ ಹಾಕಿ- ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕಿಡಿ.

ಬಾಗಲಕೋಟೆ,ಮೇ,9,2022(www.justkannada.in):  ಅಜಾನ್ ವಿರುದ್ಧ ಸುಪ್ರಭಾತ  ಅಭಿಯಾನ ಹಮ್ಮಿಕೊಂಡಿರುವ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ವಿರುದ್ಧ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಬಾಗಲಕೋಟೆಯಲ್ಲಿ ಇಂದು ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಇದು ರಾಮಸೇನೆಯೋ ಅಥವಾ ರಾವಣನ ಸೇನೆಯೋ. ಮುತಾಲಿಕ್ ನಂತವರನ್ನ ಮೊದಲು ಒದ್ದು ಒಳಗಡೆ ಹಾಕಿ. ಇಲ್ಲ ಅಂಧರೆ ಶಾಂತಿ ನೆಲೆಸಲ್ಲ. ಇಂತಹ ವಿಷಯಗಳಿಗೆ ಸರ್ಕಾರ ಒಪ್ಪಿಗೆ ಸೂಚಿಸಬಾರದು. ಇಂತಹ ವ್ಯಕ್ತಿಗಳಿಂದ ಶಾಂತಿಯ ತೋಟ ನೆಲೆಸುವುದಿಲ್ಲ. ಸರ್ಕಾರ ಬೆಂಕಿ ಹಚ್ಚುವವರನ್ನ ಬೆಳೆಯಲು ಬಿಡಬಾರದು ಎಂದು ವಾಗ್ದಾಳಿ ನಡೆಸಿದರು.

ರಾಜ್ಯ ಸರ್ಕಾರ ಇಂತಹ ವಿಷ ಬೀಜಗಳನ್ನು ಕಿತ್ತು ಹಾಕಬೇಕು. ಸರ್ಕಾರ ಮೌನವಾಗಿ ಒಪ್ಪಿಗೆ ಸೂಚಿಸುವುದನ್ನು ಬಿಡಬೇಕು. ಮೊದಲು ಮುತಾಲಿಕ್ ರಂತರನ್ನು ಒದ್ದು ಒಳಗೆ ಹಾಕಬೇಕು. ಇಲ್ಲದಿದ್ದರೆ ಸಮಾಜದಲ್ಲಿ ಶಾಂತಿ ಉಳಿಸುವುದು ಕಷ್ಟವಾಗುತ್ತದೆ ಎಂದು ಹೆಚ್.ಡಿಕೆ ತಿಳಿಸಿದರು.

Key words: pramod Muthalik-ajan-Former CM-HD Kumaraswamy